ಕೊಪ್ಪಳ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನರಿಗೆ ಅನೇಕ ತೊಂದರೆಗಳು ಎದುರಾಗಿವೆ. ಮಳೆಯಿಂದಾಗಿ ಹರಿಯುತ್ತಿರುವ ಹಳ್ಳದಲ್ಲಿಯೇ ನಡೆದುಕೊಂಡು ಹೋಗಿ ಶವಸಂಸ್ಕಾರ ಮಾಡಿದ ಘಟನೆ ತಾಲೂಕಿನ ಅಳವಂಡಿ ಗ್ರಾಮದಲ್ಲಿ ನಡೆದಿದೆ.
ಹರಿಯುವ ಹಳ್ಳದಲ್ಲಿಯೇ ಸಾಗಿ ವ್ಯಕ್ತಿಯ ಶವ ಸಂಸ್ಕಾರ - Funeral in walking in flowing water
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹರಿಯುತ್ತಿರುವ ಹಳ್ಳದಲ್ಲಿಯೇ ಸಾಗಿ ವ್ಯಕ್ತಿಯ ಶವಸಂಸ್ಕಾರ ಮಾಡಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ನಡೆದಿದೆ.
![ಹರಿಯುವ ಹಳ್ಳದಲ್ಲಿಯೇ ಸಾಗಿ ವ್ಯಕ್ತಿಯ ಶವ ಸಂಸ್ಕಾರ Koppal](https://etvbharatimages.akamaized.net/etvbharat/prod-images/768-512-9134049-264-9134049-1602401948573.jpg)
ಕೊಪ್ಪಳ: ಹರಿಯುವ ಹಳ್ಳದಲ್ಲಿಯೇ ಸಾಗಿ ಶವ ಸಂಸ್ಕಾರ..
ಕೊಪ್ಪಳ: ಹರಿಯುವ ಹಳ್ಳದಲ್ಲಿಯೇ ಸಾಗಿ ಶವ ಸಂಸ್ಕಾರ
ಅಳವಂಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಳವಂಡಿ-ಕಂಪ್ಲಿ ನಡುವಿನ ಹಳ್ಳದ ಭಾಗದಲ್ಲಿ ಸ್ಮಶಾನವಿದೆ. ಅಲ್ಲಿ ಶವಸಂಸ್ಕಾರ ಮಾಡಲು ಹಳ್ಳದಲ್ಲಿ ನಡೆದುಕೊಂಡು ಹೋಗಬೇಕು. ನಿನ್ನೆ ಸುರಿದ ಮಳೆಯಿಂದಾಗಿ ಹಳ್ಳದಲ್ಲಿ ನೀರು ಹರಿಯುತ್ತಿದ್ದು, ಹರಿಯುವ ನೀರಿನಲ್ಲಿಯೇ ಜನರು ನಡೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.