ಕರ್ನಾಟಕ

karnataka

ETV Bharat / state

ಮಾಸ್ಕ್​ ಧರಿಸದೇ ಬೇಜಾವಾಬ್ದಾರಿ ಮೆರೆದವರಿಗೆ ದಂಡ ವಿಧಿಸಿದ ಪೊಲೀಸರು... - Gangavathi

ನಗರದಲ್ಲಿ ಮಾಸ್ಕ್​ ಇಲ್ಲದೆ ಓಡಾಡುವವರನ್ನು ಹಿಡಿದು ಪೊಲೀಸರು ದಂಡ ವಿಧಿಸುತ್ತಿದ್ದಾರೆ.

Penalties
ದಂಡ

By

Published : Sep 9, 2020, 10:57 PM IST

ಗಂಗಾವತಿ:ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಜಿಲ್ಲಾಡಳಿತ ಜಾರಿಗೆ ತಂದಿರುವ ಕಡ್ಡಾಯ ಮಾಸ್ಕ್ ಅಭಿಯಾನದ ಭಾಗವಾಗಿ ಪೊಲೀಸ್ ಇಲಾಖೆ, ಕೇವಲ ಎರಡು ದಿನದಲ್ಲಿ 550 ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ಹಾಕಿದೆ.

ಮಾಸ್ಕ್​ ಧರಿಸದೇ ಬೇಜಾವಾಬ್ದಾರಿ ಮೆರೆದವರಿಗೆ ದಂಡ ವಿಧಿಸಿದ ಪೊಲೀಸರು

ನಗರದಲ್ಲಿ ಮಾಸ್ಕ್​ ಇಲ್ಲದೆ ಓಡಾಡುವವರನ್ನು ಹಿಡಿದು ದಂಡ ಹಾಕುವ ಕಾರ್ಯಚರಣೆಯನ್ನು ಪೊಲೀಸರು ಮಾಡುತ್ತಿದ್ದು, ಇದರಿಂದಾಗಿ ಈಗ ಜನರಲ್ಲಿ ಜಾಗೃತಿ ಉಂಟಾಗಿದೆ. ಬಹುತೇಕರು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ.

ನಗರ ಠಾಣೆಯ ಪೊಲೀಸರು ಮೊದಲ ದಿನ 77 ಜನರಿಗೆ ದಂಡ ಹಾಕಿ 14,200 ರೂಪಾಯಿ, ಎರಡನೇ ದಿನ 66 ಜನರಿಗೆ ದಂಡ ಹಾಕಿ 13,200 ರೂಪಾಯಿ ಸಂಗ್ರಹಿಸಿದ್ದಾರೆ. ಸಂಚಾರಿ ಠಾಣೆಯ ಪೊಲೀಸರು, ಮೊದಲ ದಿನ 71 ಪ್ರಕರಣ ದಾಖಲಿಸಿ 14,200 ಹಾಗೂ ಎರಡನೇ ದಿನ 66 ಪ್ರಕರಣಗಳಲ್ಲಿ 13,200 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ABOUT THE AUTHOR

...view details