ಕುಷ್ಟಗಿ (ಕೊಪ್ಪಳ):ಅಪರೂಪ ಎಂಬಂತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಕುಷ್ಟಗಿ ತಾಲೂಕಿನ ವೆಂಕಟಾಪೂರ ಗ್ರಾಮದಲ್ಲಿ ರಾಷ್ಟ್ರಪಕ್ಷಿ ನವಿಲು ಹಾಗೂ ಕೋಳಿ ಜಗಳದ ವಿಡಿಯೋ ವೈರಲ್ ಆಗಿದೆ.
ನವಿಲು-ಕೋಳಿ ಭರ್ಜರಿ ಕಾಳಗ: ವಿಡಿಯೋ ವೈರಲ್! - ಕೋಳಿ ಲೇಟೆಸ್ಟ್ ನ್ಯೂಸ್
ವೆಂಕಟಾಪೂರ ಗ್ರಾಮದಲ್ಲಿ ರಾಷ್ಟ್ರಪಕ್ಷಿ ನವಿಲು ಹಾಗೂ ಕೋಳಿ ಅಹಾರಕ್ಕಾಗಿ ಕಾದಾಟ ನಡೆಸಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದೆ.
ತಾಲೂಕಿನ ವೆಂಕಟಾಪೂರ ಬೆಟ್ಟದಲ್ಲಿ ನವಿಲುಗಳು ಹಿಂಡು ಹಿಂಡಾಗಿ ವಾಸವಾಗಿರುವ ಹಿನ್ನೆಲೆ, ನವಿಲು ಗುಡ್ಡ ಎಂದೇ ಹೆಸರುವಾಸಿ. ನವಿಲುಗಳಿಗೆ ಈ ಜಾಗೆ ಪ್ರಾಶಸ್ತ್ಯ ಎನಿಸಿದೆ. ಹೀಗಾಗಿ ಈ ಪ್ರದೇಶದಲ್ಲಿ ಎಲ್ಲೆಲ್ಲೂ ನವಿಲುಗಳನ್ನು ಕಾಣಬಹುದಾಗಿದೆ. ನವಿಲುಗಳ ರಕ್ಷಣೆಗೆ ನವಿಲು ಪಾರ್ಕ್ ನಿರ್ಮಿಸುವ ಹಕ್ಕೊತ್ತಾಯ ಕೇಳಿ ಬರುತ್ತಿದೆ.
ನವಿಲುಗಳು ಅಹಾರ ಅರಸಿ ಊರಿಗೆ ಬರುತ್ತಿದ್ದು, ಅಲ್ಲಿ ಕೋಳಿಗಳ ಜೊತೆಯಲ್ಲಿ ಬೆರೆಯುತ್ತಿರುವುದು ಗಮನಾರ್ಹ ಎನಿಸಿದೆ. ಇದೀಗ ಕೋಳಿ ಮತ್ತು ನವಿಲು ಅಹಾರಕ್ಕಾಗಿ ಕಾದಾಟ ನಡೆಸಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.