ಬಳ್ಳಾರಿ: ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಘಟಕದಿಂದ ಪಾಟೀಲ ಪುಟ್ಟಪ್ಪ ಅವರ ನುಡಿ ನಮನ ಕಾರ್ಯಕ್ರಮ ನಡೆಯಿತು.
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮ ಕಲ್ಮಠ್ ಮಾತನಾಡಿ ಹೆಸರು ಪುಟ್ಟದಾಗಿದೆ. ಆದ್ರೆ ಅವರ ಕಾರ್ಯ ಬಹಳ ದೊಡ್ಡದು. ಕನ್ನಡ ನಾಡು ನುಡಿ, ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ, ಕನ್ನಡಿಗರ ಏಳಿಗೆಗಾಗಿ ಶ್ರಮಿಸಿದ ಜೀವಿ ಪಾಪು ಎಂದರು. ಇನ್ನು ಮೌನಾಚರಣೆ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಕೊರೊನಾ ವೈರಸ್ ಬಗ್ಗೆ ಜಾಗೃತರಾಗಿ ಎನ್ನುವ ಸಂದೇಶ ಸಾರಿದರು.
ಗಂಗಾವತಿ: ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಾಟೀಲ್ ಪುಟಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘಟನೆಯ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬೆಳಗಲ್ ಮಠ ಅವರ ನೇತೃತ್ವದಲ್ಲಿ ಸಭೆ ಸೇರಿದ್ದ ಪತ್ರಕರ್ತರು, ಒಂದು ನಿಮಿಷದ ಮೌನಾಚರಣೆ ಆಚರಿಸಿದರು.