ಕುಷ್ಟಗಿ (ಕೊಪ್ಪಳ):ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಿಂದ ಕೊರೊನಾ ಸೋಂಕಿತರು ಹೊರಗೆ ವಿಹರಿಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕುಷ್ಟಗಿ ಕೋವಿಡ್ ಕೇರ್ ಸೆಂಟರ್ನಲ್ಲಿ ಸದ್ಯ 28 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಕೆಲ ಸೋಂಕಿತರು ಹೊರಗೆ ಬಂದು ಕುಳಿತುಕೊಳ್ಳುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ ಸೆಂಟರ್ನಿಂದ ಹೊರಗೆ ಬರುತ್ತಿರುವ ಸೋಂಕಿತರು ಆಸ್ಪತ್ರೆಯ ಊಟ ರುಚಿ ಇಲ್ಲದ ಕಾರಣ ಹೊರಗಿನ ಬಿಸಿ ನೀರು, ತಿಂಡಿ, ಹಣ್ಣು ತರಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಸ್ಥಳೀಯರು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದರೂ ಪ್ರಯೋಜನ ಆಗ್ತಿಲ್ಲ.
ಕೆಲ ರೋಗಿಗಳು ಹೊರಗೆ ಬಂದು ಸಾರ್ವಜನಿಕ ನಳದ ಪಕ್ಕದಲ್ಲಿ ಉಗುಳುತ್ತಿದ್ದು, ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲಿಸದೇ ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.