ಕರ್ನಾಟಕ

karnataka

ETV Bharat / state

ಸರ್ವ ಜನಾಂಗದ ಚಿರಶಾಂತಿಯ ತೋಟ ಈ ಸ್ಮಶಾನೋದ್ಯಾನ: ಏನಿದು ಹೊಸ ಕಾನ್ಸೆಪ್ಟ್ ? - ಸ್ಮಶಾನೋದ್ಯಾನ

'ಸ್ಮಶಾನೋದ್ಯಾನ' ಎಂಬ ಹೊಸ ಕಾನ್ಸೆಪ್ಟ್​ ಅಡಿ ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪ್ ಎಂಬ ಗ್ರಾಮದ ರುದ್ರಭೂಮಿಯಲ್ಲಿ ಉದ್ಯಾನ ನಿರ್ಮಾಣ ಮಾಡಲಾಗಿದೆ.

park build in burial ground  of gangavathi
ಸ್ಮಶಾನದಲ್ಲಿ ಉದ್ಯಾನವನ ನಿರ್ಮಾಣ

By

Published : Oct 25, 2021, 7:59 PM IST

ಗಂಗಾವತಿ/ಕೊಪ್ಪಳ: ಸ್ಮಶಾನ ಎಂದಾಕ್ಷಣ ಕಣ್ಣಿಗೆ ಕಾಣೋದು ಬರೀ ಶವ ಸುಡುವ, ಹೂಳಿಕ್ಕುವ ಜಾಗ, ಗೋರಿಗಳು. ಆದರೆ ಇದೀಗ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ವಿಭಿನ್ನ ಯೋಚನೆಯಿಂದಾಗಿ ರುದ್ರಭೂಮಿಯಲ್ಲಿ ಪಾರ್ಕ್​ ನಿರ್ಮಾಣವಾಗಿದೆ.

ಸ್ಮಶಾನದಲ್ಲಿ ಉದ್ಯಾನ ನಿರ್ಮಾಣ

'ಸ್ಮಶಾನೋದ್ಯಾನ' ಎಂಬ ಹೊಸ ಕಾನ್ಸೆಪ್ಟ್​ ಅಡಿ ಉದ್ಯಾನ ಮಾದರಿಯಲ್ಲಿ ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪ್ ಎಂಬ ಗ್ರಾಮದ ರುದ್ರಭೂಮಿಗೆ ಮಾರ್ಡನ್​ ಟಚ್ ಕೊಟ್ಟಿದ್ದು ಇದೀಗ ಸಾರ್ವಜನಿಕರ ಆಕರ್ಷಣೀಯ ಕೇಂದ್ರವಾಗಿದೆ.

ಗ್ರಾಮದ ಹೊರ ಭಾಗದಲ್ಲಿ ಪಾಳು ಬಿದ್ದಿದ್ದು, ಎರಡು ಎಕರೆ ಜಮೀನನ್ನು ನರೇಗಾ ಯೋಜನೆಯಡಿ 22 ಲಕ್ಷ ಖರ್ಚು ಮಾಡಿ ಥೇಟ್ ಉದ್ಯಾನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿಗೆ ಕಾಲಿಟ್ಟರೆ ಸಾಕು ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆ ನೆನಪಾಗುತ್ತದೆ. ಈ ಸ್ಮಶಾನದಲ್ಲಿ ಎಲ್ಲ ಜಾತಿ ಜನಾಂಗದವರ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಲಾಗಿದೆ. ಕವಿ ವಾಣಿಯಂತೆ ಈ ಸ್ಮಶಾನೋದ್ಯಾನದಲ್ಲಿ ಹಿಂದೂ-ಮುಸಲ್ಮಾನ, ಕ್ರೈಸ್ತರು ಸೇರಿದಂತೆ ಎಲ್ಲಾ ಜನಾಂಗಕ್ಕೂ ಸಮಾನ ಅವಕಾಶ ನೀಡಿರುವುದು ವಿಶೇಷ.

ABOUT THE AUTHOR

...view details