ಕರ್ನಾಟಕ

karnataka

ETV Bharat / state

ಕಾಮಗಾರಿಗಳ ಕಡತ ನಾಪತ್ತೆ: ಪಂಚಾಯತ್​ ಮುಂದೆ ಸದಸ್ಯರ ಪ್ರತಿಭಟನೆ - ಕೊಪ್ಪಳದಲ್ಲಿ ನರೇಗಾ ಯೋಜನೆ ಅವ್ಯವಹಾರ ಆರೋಪ ಸುದ್ದಿ

ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿವುಳ್ಳ ಕಡತ ನಾಪತ್ತೆಯಾಗಿದ್ದು, ಮಾಹಿತಿ ನೀಡುವಂತೆ ಒತ್ತಾಯಿಸಿ ಹಣವಾಳ ಗ್ರಾ.ಪಂ. ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

protest
ಪಂಚಾಯ್ತಿ ಮುಂದೆ ಸದಸ್ಯರ ಪ್ರತಿಭಟನೆ

By

Published : Dec 20, 2019, 7:02 PM IST

ಗಂಗಾವತಿ/ಕೊಪ್ಪಳ: ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿವುಳ್ಳ ಕಡತ ನಾಪತ್ತೆಯಾಗಿದ್ದು, ಈ ಕುರಿತು ಮಾಹಿತಿ ನೀಡುವಂತೆ ಒತ್ತಾಯಿಸಿ ಪಂಚಾಯತ್​ ಸದಸ್ಯರು ಪ್ರತಿಭಟನೆ ನಡೆಸಿರುವ ಘಟನೆ ಗಂಗಾವತಿ ತಾಲೂಕಿನ ಹಣವಾಳ ಗ್ರಾಮ ಪಂಚಾಯತ್​ ಮುಂದೆ ನಡೆದಿದೆ.

ಗ್ರಾಮ ಪಂಚಾಯತ್​ ಮುಂದೆ ಸದಸ್ಯರ ಪ್ರತಿಭಟನೆ
ಪಂಚಾಯತ್​ನಿಂದ ಕನಕಗಿರಿ ತಾಲೂಕಿನ ಕಲಕೇರಿ ಕೆರೆಯಲ್ಲಿ ಹಾಗೂ ಹಣವಾಳ ಗ್ರಾಮದ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಗೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗಿತ್ತು. ವಾಸ್ತವದಲ್ಲಿ ಕೇವಲ ಶೇ. 10 ರಷ್ಟು ಮಾತ್ರ ಕಾಮಗಾರಿಯಾಗಿದೆ. ಆದರೆ ಎರಡು ಕಾಮಗಾರಿಗಳಿಂದ 99 ಲಕ್ಷ ರೂಪಾಯಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಾಗೂ ಮಾಹಿತಿ ಹಾಗೂ ಕಡತ ಕೇಳಿದರೆ ಅಧ್ಯಕ್ಷ, ಪಿಡಿಒ ಹಾಗೂ ಜೆಇ ಪರಸ್ಪರ ನುಣುಚಿಕೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details