ಕರ್ನಾಟಕ

karnataka

ETV Bharat / state

ಗಂಗಾವತಿ: ಗ್ರಾಮ ಪಂಚಾಯತ್​ ಕಾರ್ಯದರ್ಶಿ ನೇಣಿಗೆ ಶರಣು - panchayath secretory committed suiside

ಪಂಚಾಯತ್ ಕಾರ್ಯದರ್ಶಿ ಹೊಲದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

panchayath-secretory-committed-suiside
ಮುಕ್ಕುಂಪಿ ಮೂಲದ ಪಂಚಾಯತಿ ಕಾರ್ಯದರ್ಶಿ ನೇಣು ಬಿಗಿದು ಆತ್ಮಹತ್ಯೆ

By

Published : Apr 20, 2022, 10:24 AM IST

ಗಂಗಾವತಿ: ಮುಕ್ಕಂಪಿ ಮೂಲದ ಗ್ರಾಮ ಪಂಚಾಯತ್ ಕಾರ್ಯದರ್ಶಿ ಹೊಲದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮನೋಜ್ ಕುಮಾರ (28) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯು ಪ್ರಸ್ತುತ ಕೊಪ್ಪಳ‌ ತಾಲೂಕಿನ ಶಿವಪುರ ಗ್ರಾಮ‌ ಪಂಚಾಯತ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದುದಾಗಿ ತಿಳಿದುಬಂದಿದೆ.

ಮುಕ್ಕುಂಪಿಯ ತಮ್ಮ ಹೊಲಕ್ಕೆ ಹೋಗಿ ಬರುವುದಾಗಿ ಹೇಳಿದ್ದ ಮನೋಜ್, ಬಹಳ ಹೊತ್ತಾದರೂ ಬಾರದ ಹಿನ್ನೆಲೆ ಅನುಮಾನಗೊಂಡ ಮನೆಯವರು ತೋಟದ ಮನೆಯಲ್ಲಿ ಹೋಗಿ ನೋಡಿದಾಗ ಮನೋಜ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮನೋಜ್ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಕುಟುಂಬಸ್ಥರು, ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಲ್ಲಿ ಒತ್ತಾಯಿಸಿದ್ದಾರೆ. ಸದ್ಯ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.

ಓದಿ :ಶಿಗ್ಗಾವಿಯಲ್ಲಿ ಕೆಜಿಎಫ್​-2 ಸಿನಿಮಾ ವೀಕ್ಷಣೆ ವೇಳೆ ಗುಂಡು ಹಾರಿಸಿದ ದುಷ್ಕರ್ಮಿ.. ಓರ್ವನಿಗೆ ಗಾಯ

ABOUT THE AUTHOR

...view details