ಕೊಪ್ಪಳ: ರೈತರೊಬ್ಬರ ಹೊಲದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿದ್ದು, ಸ್ಥಳದಲ್ಲಿದ್ದವರುವವರು ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಕುಷ್ಟಗಿ ತಾಲೂಕಿನ ಹೊನಗಡ್ಡಿ ಗ್ರಾಮದ ರಾಮಪ್ಪ ಮ್ಯಾದನೇರಿ ಎಂಬುವರ ಹೊಲದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿವೆ.
ಕುಷ್ಟಗಿಯಲ್ಲಿ ಜೋಡಿ ಕರಡಿಗಳು ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ - Koppal
ಕುಷ್ಟಗಿ ತಾಲೂಕಿನ ಹೊನಗಡ್ಡಿ ಗ್ರಾಮದ ರಾಮಪ್ಪ ಮ್ಯಾದನೇರಿ ಎಂಬುವರ ಹೊಲದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿವೆ.
![ಕುಷ್ಟಗಿಯಲ್ಲಿ ಜೋಡಿ ಕರಡಿಗಳು ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ Koppal](https://etvbharatimages.akamaized.net/etvbharat/prod-images/768-512-12276429-thumbnail-3x2-net.jpg)
ಹೊನಗಡ್ಡಿ ಗ್ರಾಮದಲ್ಲಿ ಪತ್ತೆಯಾದ ಜೋಡಿ ಕರಡಿ
ಜೋಡಿ ಕರಡಿಗಳನ್ನು ನೋಡಿದ ರೈತರು ಜೋರಾಗಿ ಕೂಗಾಡಿದ್ದಾರೆ. ರೈತರ ಕೂಗಾಟದಿಂದ ಕರಡಿಗಳು ಬೆದರಿ ಸ್ಥಳದಿಂದ ಕಾಲ್ಕಿತ್ತಿವೆ ಎಂದು ತಿಳಿದುಬಂದಿದೆ. ಹಗಲು ಹೊತ್ತಿನಲ್ಲಿಯೇ ಕರಡಿಗಳು ಜಮೀನಿನಲ್ಲಿ ಪ್ರತ್ಯಕ್ಷವಾಗಿರುವುದನ್ನು ಕಂಡು ರೈತರು ಆತಂಕಗೊಂಡಿದ್ದಾರೆ.
ಇದನ್ನೂ ಓದಿ:ಮುಂಗಾರು ಮಳೆಗೆ ಮಸ್ಕಿ ಜಲಾವೃತ.. ವರುಣನ ಆರ್ಭಟಕ್ಕೆ ನಲುಗಿದ ಜನ