ಕರ್ನಾಟಕ

karnataka

ETV Bharat / state

ಮಂಜೂರಾಗದ ವೇತನ.. ಶಾಸಕರಿಗೆ ಸರ್ಕಾರಿ ವಸತಿ ನಿಲಯದ ಹೊರಗುತ್ತಿಗೆ ನೌಕರರಿಂದ ಮನವಿ.. - ಹೊರಗುತ್ತಿಗೆ ನೌಕರರು

ರಾಜ್ಯ ಸರ್ಕಾರಿ ವಸತಿ ನಿಲಯದ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಶಾಸಕ ಗೃಹ ಕಚೇರಿಗೆ ತೆರಳಿದ ನೌಕರರು, ವೇತನ ಮಂಜೂರು ಮಾಡಿಸುವಂತೆ ಮನವಿ ಮಾಡಿದರು..

Outsourcing employees  demanded for salary and give request letter to MLA
ಶಾಸಕರಿಗೆ ಮನವಿ ಸಲ್ಲಿಸಿದ ಸರ್ಕಾರಿ ವಸತಿ ನಿಲಯದ ಹೊರಗುತ್ತಿಗೆ ನೌಕರರು

By

Published : Jan 25, 2021, 7:09 PM IST

ಗಂಗಾವತಿ (ಕೊಪ್ಪಳ):ಕಳೆದ ಒಂದೂವರೆ ವರ್ಷದಿಂದ ತಮಗೆ ವೇತನ ಮಂಜೂರಾಗಿಲ್ಲ. ಕೂಡಲೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ವೇತನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ನಾನಾ ವಸತಿ ನಿಲಯದ ಹೊರ ಗುತ್ತಿಗೆ ನೌಕರರು ಶಾಸಕ ಪರಣ್ಣ ಮುನವಳ್ಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರಿ ವಸತಿ ನಿಲಯದ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಶಾಸಕ ಗೃಹ ಕಚೇರಿಗೆ ತೆರಳಿದ ನೌಕರರು, ವೇತನ ಮಂಜೂರು ಮಾಡಿಸುವಂತೆ ಮನವಿ ಮಾಡಿದರು.

ಕಳೆದ ಒಂದೂವರೆ ವರ್ಷದಿಂದ ವೇತನ ಮಂಜೂರಾಗಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಶಾಸಕ ಪರಣ್ಣ ಮುನವಳ್ಳಿ ಭರವಸೆ ನೀಡಿದರು.

ಇದನ್ನೂ ಓದಿ:ರಾಜಕೀಯ ವೈರತ್ವ ಮರೆತು ವೇದಿಕೆ ಹಂಚಿಕೊಂಡ ಅಶ್ವತ್ಥ್ ನಾರಾಯಣ್-ಜಿಟಿಡಿ

ABOUT THE AUTHOR

...view details