ಗಂಗಾವತಿ: ನಗರದಲ್ಲಿ ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ಅಡಚಣೆಯಾಗಿರುವ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಕಳಿಸುವ ಪೊಲೀಸ್ ಮತ್ತು ನಗರಸಭೆ ಸಿಬ್ಬಂದಿಯ ಆಪರೇಷನ್ ಕ್ಲಿಯರ್ ಕ್ಯಾಟಲ್ ಮಂಗಳವಾರ ಮಧ್ಯರಾತ್ರಿ ನಗರದಲ್ಲಿ ನಡೆಯಿತು.
ಮಧ್ಯರಾತ್ರಿ ನಡೆಯಿತು ಆಪರೇಷನ್ ಬಿಡಾಡಿ ದನ! ಈ ಕಾರ್ಯಾಚರಣೆ ಹೇಗಿತ್ತು ಅಂದ್ರೆ
ಗಂಗಾವತಿ ನಗರದಲ್ಲಿ ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ಅಡಚಣೆಯಾಗಿರುವ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಕಳುಹಿಸುವ ಪೊಲೀಸ್ ಮತ್ತು ನಗರಸಭೆ ಸಿಬ್ಬಂದಿ ಆಪರೇಷನ್ ಕ್ಲಿಯರ್ ಕ್ಯಾಟಲ್ ಮಂಗಳವಾರ ಮಧ್ಯರಾತ್ರಿ ನಗರದಲ್ಲಿ ನಡೆಯಿತು.
ಮಧ್ಯರಾತ್ರಿ ನಡೆಯಿತು ಆಪರೇಷನ್ ಕ್ಲೀಯರ್ ಕ್ಯಾಟಲ್
ಕಳೆದ ಹಲವು ವರ್ಷದಿಂದ ನಗರದಲ್ಲಿ ವಾರಸುದಾರರಿದ್ದರೂ ಇಲ್ಲದಂತಿರುವ ಸಾವಿರಾರು ಬಿಡಾಡಿ ದನಗಳು ರಸ್ತೆ ಬದಿಯಲ್ಲಿ ಪೇಪರ್, ಪ್ಲಾಸ್ಟಿಕ್, ತ್ಯಾಜ್ಯವನ್ನು ಮೇಯ್ದು, ರಸ್ತೆ ಬದಿಯಲ್ಲಿ ವಿಶ್ರಾಂತಿಗೆ ಜಾರುತ್ತಿದ್ದವು. ಇದರಿಂದಾಗಿ ಜನ ಮತ್ತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಇದು ಸಂಚಾರಿ ಪೊಲೀಸರ ತಲೆನೋವಿಗೆ ಕಾರಣವಾಗಿತ್ತು.
ಹಲವು ಬಾರಿ ನಗರಸಭೆಯಿಂದ ಎಚ್ಚರಿಕೆ ನೀಡಿದ್ದರೂ,ವಾರಸುದಾರರು ಗಮನ ನೀಡದ್ದರಿಂದ ಇದೀಗ ಗೋಶಾಲೆಗೆ ಕಳುಹಿಸುವ ಕೆಲಸವನ್ನು ನಗರಸಭೆ ಸಿಬ್ಬಂದಿ ಪೊಲೀಸರು ಮಾಡುತ್ತಿದ್ದಾರೆ.