ಕೊಪ್ಪಳ: ಜಿಲ್ಲೆಯ ಬಸಾಪುರ ಬಳಿ ಇರುವ ಖಾಸಗಿ ವಿಮಾನ ನಿಲ್ದಾಣದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಸಂಜೆ ಪ್ರಯಾಣ ಬೆಳೆಸಿದರು.
ಕೊಪ್ಪಳದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಸಿದ್ದರಾಮಯ್ಯ - Siddaramaiah who traveled from Koppal to Bangalore
ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಸಂಜೆ ಪ್ರಯಾಣ ಬೆಳೆಸಿದರು.
ಬೆಂಗಳೂರಿಗೆ ಪ್ರಯಾಣ ಬೆಳಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ತಮ್ಮ ಕ್ಷೇತ್ರ ಬಾದಾಮಿಗೆ ಭೇಟಿ ನೀಡಿದ ಬಳಿಕ ಇಂದು ಸಂಜೆ ಕುಷ್ಟಗಿ ಮಾರ್ಗವಾಗಿ ನೇರವಾಗಿ ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಖಾಸಗಿ ಏರ್ಪೋರ್ಟ್ಗೆ ಆಗಮಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಭೈರತಿ ಸುರೇಶ್ ಸಹ ಸಿದ್ದರಾಮಯ್ಯ ಅವರ ಜೊತೆ ತೆರಳಿದರು.
ಆರು ಆಸನದ ವಿಶೇಷ ವಿಮಾನದಲ್ಲಿ ಏಳು ಜನರಾಗಿದ್ದರಿಂದ ವಿಮಾನವೇರಿದ್ದ ಮಾಜಿ ಸಚಿವ ಶಿವರಾಜ್ ತಂಗಡಗಿ ಕೆಳಗಿಳಿಯಬೇಕಾಯಿತು.