ಕುಷ್ಟಗಿ (ಕೊಪ್ಪಳ): ತ್ರಿವಳಿ ಜಿಲ್ಲೆಗಳನ್ನು (ಗದಗ,ಕೊಪ್ಪಳ,ರಾಯಚೂರು) ಸಂಪರ್ಕಿಸುವ ಚಿಕ್ಕಹೆಸರೂರು-ಮುಂಡರಗಿ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಸ್ಥಳೀಯರು ಕಾಮಗಾರಿಗೆ ಅಡ್ಡಿಪಡಿಸಿರುವ ಘಟನೆ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆಯಿತು.
ಚಿಕ್ಕಹೆಸರೂರು-ಮುಂಡರಗಿ ರಸ್ತೆ ಕಾಮಗಾರಿಗೆ ಗ್ರಾಮಸ್ಥರ ವಿರೋಧ - Chikkahesaruru mundaragi road construction news
ಚಿಕ್ಕಹೆಸರೂರು ಮುಂಡರಗಿ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಸ್ಥಳೀಯರು ಕಾಮಗಾರಿಗೆ ಅಡ್ಡಿಪಡಿಸಿರುವ ಘಟನೆ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆಯಿತು.
Road construction
ಮುದೇನೂರು ಗ್ರಾಮದ ವ್ಯಾಪ್ತಿಯಲ್ಲಿರುವ ರಸ್ತೆಯನ್ನು ಅಗಲೀಕರಿಸದೆ ಕಾಮಗಾರಿ ಕೈಗೊಂಡಿದ್ದಾರೆ. ಜೊತೆಗೆ ಸೂಕ್ತ ಪ್ರಮಾಣದಲ್ಲಿ ರಸ್ತೆಗೆ ಜಲ್ಲಿಕಲ್ಲು, ಡಾಂಬರ್ ಬಳಸದೆ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಜೆ. ಈ. ಭೀಮಸೇನ ರಾವ್ ವಜ್ರಬಂಡಿ ಅವರು ಆಗಿರುವ ವ್ಯತ್ಯಾಸವನ್ನು ಸರಿಪಡಿಸಿ ಗುಣಮಟ್ಟದ ರಸ್ತೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
TAGGED:
ಕೊಪ್ಪಳ ರಸ್ತೆ ಕಾಮಗಾರಿ ನ್ಯೂಸ್