ಗಂಗಾವತಿ: ದ್ವಿತೀಯ ಪಿಯುಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡ ಜಿಲ್ಲೆಯ ಏಕೈಕ ವಿದ್ಯಾರ್ಥಿನಿ ನಗರದಲ್ಲಿ ಯಶಸ್ವಿಯಾಗಿ ಪರೀಕ್ಷೆ ಮುಗಿಸಿದ್ದಾರೆ. ಆದರೆ, ಕೇವಲ ಒಬ್ಬ ವಿದ್ಯಾರ್ಥಿನಿಗಾಗಿ 20 ಜನ ಸಿಬ್ಬಂದಿ ಕೆಲಸ ನಿರ್ವಹಿಸಿದ್ದಾರೆ.
ಇಲ್ಲಿನ ವೆಂಕಟೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ, ಎಲ್ಲ ಮಕ್ಕಳಂತೆ ಸರ್ಕಾರಿ ಕೃಪಾಂಕ ಪಡೆದು ಉತ್ತೀರ್ಣರಾಗಿದ್ದರು. ಆದರೆ, ಅದೇಕೋ ಆಕೆಗೆ ನೀಡಿದ್ದ ಅಂಕ ಸರಿಕಾಣಲಿಲ್ಲ. ತಾನು ಚೆನ್ನಾಗಿಯೇ ಅಭ್ಯಾಸ ಮಾಡಿದ್ದು, ಸರ್ಕಾರದ ಅಂಕ ಬೇಡ ಎಂದು ತಿರಸ್ಕರಿಸಿದರು.
ವಿದ್ಯಾರ್ಥಿನಿ ಭೂಮಿಕಾಗೆ ಸರ್ಕಾರ ನೀಡಿದ್ದ ಅಂಕ ಮರು ಪರೀಕ್ಷೆ ಬರೆಯಲು ಅರ್ಜಿಯನ್ನು ಸಲ್ಲಿಸಿದ್ದರು. ನಿಯಮದಂತೆ ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಈ ವೇಳೆ, 20 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪರೀಕ್ಷೆಗೆ ಹಾಜರಾದ ಏಕೈಕ ವಿದ್ಯಾರ್ಥಿನಿಗೆ 20 ಸಿಬ್ಬಂದಿ ನಿಯೋಜನೆ ಕೊರೊನಾ ಕಾರಣದಿಂದ ನಾನು ಪರೀಕ್ಷೆಗೆ ಹಾಜರಾಗಿರಲಿಲ್ಲ. ಆದರೆ, ಸರ್ಕಾರ ರಿಪೀಟರ್ಸ್ ಎಂದು ಪರಿಗಣಿಸಿ ಶೇ.37ರಷ್ಟು ಅಂಕ ನೀಡಿ ಉತ್ತೀರ್ಣ ಮಾಡಿದೆ. ಆದರೆ, ನಾನು ಚೆನ್ನಾಗಿ ಅಭ್ಯಾಸ ಮಾಡಿದ್ದೇನೆ. ಶೇ. 85ಕ್ಕಿಂತಲೂ ಹೆಚ್ಚು ಅಂಕ ಪಡೆಯುವ ನಿರೀಕ್ಷೆ ಇದೆ ಎಂದು ವಿದ್ಯಾರ್ಥಿನಿ ಭೂಮಿಕಾ ಹೇಳಿದ್ದಾರೆ.
ಓದಿ:ನಾಡ ಬಂದೂಕು ಸಿಡಿಸಿ ಕೇಂದ್ರ ಸಚಿವರಿಗೆ ಸ್ವಾಗತ ಪ್ರಕರಣ: ಮೂವರು ಕಾನ್ಸ್ಟೇಬಲ್ ಅಮಾನತು!