ಕರ್ನಾಟಕ

karnataka

ETV Bharat / state

ಅನ್ನದಾತನನ್ನೂ ಬಿಡದ ಹ್ಯಾಕರ್ಸ್​... ರೈತನ ಖಾತೆಯಿಂದ ಒಂದೂವರೆ ಲಕ್ಷ ದೋಚಿದ ಚೋರರು

ರೈತನ ಖಾತೆಯಿಂದ ಆನ್​​ಲೈನ್​ ಮೂಲಕ ಒಂದೂವರೆ ಲಕ್ಷ ಎಗರಿಸಿದ ಘಟನೆ ಗಂಗಾವತಿ ತಾಲೂಕಿನ ಕೋಟಯ್ಯ ಕ್ಯಾಂಪಿನಲ್ಲಿ ನಡೆದಿದೆ.

online cheating case from farmers account
ಹಣ ಕಳೆದುಕೊಂಡ ರೈತನ ಅಳಲು

By

Published : Dec 16, 2019, 6:21 PM IST

ಗಂಗಾವತಿ:ರೈತರೊಬ್ಬರ ಖಾತೆಯಿಂದ ಆನ್​​ಲೈನ್​​ ಮೂಲಕ ಖದೀಮರು ಹಂತಹಂತವಾಗಿ ಒಂದೂವರೆ ಲಕ್ಷ ರೂಪಾಯಿ ಎಗರಿಸಿದ್ದಾರೆ.

ರೈತ ಕೆ.ಮಂಜುಪ್ಪ ಎಂಬವರು ಹಣ ಕಳೆದುಕೊಂಡವರು. ತಾಲೂಕಿನ ಶ್ರೀರಾಮನಗರದ ಸಮೀಪದ ಕೋಟಯ್ಯಕ್ಯಾಂಪಿನಲ್ಲಿ ಈ ಘಟನೆ ನಡೆದಿದೆ.

ಹಣ ಕಳೆದುಕೊಂಡ ರೈತನ ಅಳಲು

ಹಣ ಕಳೆದುಕೊಂಡಿರುವ ರೈತ ಖಾತೆ ಹೊಂದಿರುವ ಬ್ಯಾಂಕ್ ಹಾಗೂ ಸೈಬರ್​ ಠಾಣೆಗಳ ಬಾಗಿಲಿಗೆ ದಿನವೂ ಅಲೆದಾಡುತ್ತಿದ್ದಾರೆ.

ಬೆಂಗಳೂರು, ಹೊಸಪೇಟೆ, ಹುಬ್ಬಳ್ಳಿ...ಹೀಗೆ ಬೇರೆ ಬೇರೆ ಕಡೆಗಳಲ್ಲಿ ಹಣ ಡ್ರಾ ಆಗಿರುವ ಕುರಿತು ತಮ್ಮ ಮೊಬೈಲ್​​ಗೆ ಸಂದೇಶ ಬಂದಿದೆ. ಆದರೆ, ಆ ಸಂದರ್ಭದಲ್ಲಿ ಜಮೀನಿನ ಕೆಲಸದಲ್ಲಿ ನಿರತನಾಗಿದ್ದೆ ಎಂದು ರೈತ ತಿಳಿಸಿದರು.

ABOUT THE AUTHOR

...view details