ಗಂಗಾವತಿ:ಯಾವುದೇ ಪ್ರವಾಸ ಮಾಡದೆ ಇರುವ 26 ವರ್ಷದ ಯುವಕನೊಬ್ಬನಿಗೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಕಿಲ್ಲಾ ಏರಿಯವನ್ನು ಎರಡನೇ ಬಾರಿಗೆ ಸೀಲ್ ಡೌನ್ ಮಾಡಲಾಗಿದೆ.
ಟ್ರಾವೆಲ್ ಹಿಸ್ಟರಿಯೇ ಇಲ್ಲದ ಯುವಕನಿಗೆ ಕೊರೊನಾ: ಕಿಲ್ಲಾ ಮತ್ತೆ ಸೀಲ್ ಡೌನ್ - Killa lock down
ಗಂಗಾವತಿಯ ಕಿಲ್ಲಾ ಏರಿಯಾದ 26 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಏರಿಯಾವನ್ನು ಮತ್ತೆ ಸೀಲ್ ಡೌನ್ ಮಾಡಲಾಗಿದೆ.
Seal down
ಯುವಕ ವಾಸಿಸುತ್ತಿದ್ದ ಈದ್ಗಾ ಪ್ರಾರ್ಥನಾ ಸ್ಥಳದ ಹಿಂದಿರುವ ಮೂಕಾರತಿಯಮ್ಮ ದೇವಸ್ಥಾನ ಮುಂಭಾಗದ ಕಿಲ್ಲಾ ಏರಿಯಾವನ್ನು ನಗರಸಭೆಯ ಅಧಿಕಾರಿಗಳು ಎರಡನೇ ಬಾರಿಗೆ ಸೀಲ್ ಡೌನ್ ಮಾಡಿದ್ದಾರೆ.
ಯುವಕನಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಗಳು ತಿಳಿಸಿದ್ದಾರೆ. ಇದೀಗ ಆತನಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು, ಯುವಕ ವಾಸವಾಗಿದ್ದ ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.