ಕೊಪ್ಪಳ: ಇಟ್ಟಿಗೆ ತುಂಬಿದ್ದ ಟ್ರಾಕ್ಟರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಬಳಿ ನಡೆದಿದೆ.
ಚಲಿಸುತ್ತಿದ್ದಾಗ ಟೈರ್ ಸ್ಫೋಟಗೊಂಡು ಟ್ರಾಕ್ಟರ್ ಪಲ್ಟಿ, ಓರ್ವ ಸಾವು.. - ಓರ್ವ ಕಾರ್ಮಿಕ ಸಾವು
ಬಸಾಪಟ್ಟಣದಿಂದ ಇಟ್ಟಿಗೆ ಲೋಡ್ ಮಾಡಿಕೊಂಡು ಬೇವೂರು ಬಳಿಯ ವಣಗೇರಿಗೆ ಟ್ರಾಕ್ಟರ್ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಟ್ರಾಕ್ಟರ್ ಟೈರ್ ಸ್ಪೋಟಗೊಂಡಿದ್ದು, ಪರಿಣಾಮ ಟ್ರಾಲಿ ಪಲ್ಟಿಯಾಗಿದೆ.
ಇಟ್ಟಿಗೆ ತುಂಬಿದ್ದ ಟ್ರಾಕ್ಟರ್ ಪಲ್ಟಿ ; ಓರ್ವ ಸಾವು
ಕಮಲೆಪ್ಪ ಲಮಾಣಿ (35) ಎಂಬ ಕಾರ್ಮಿಕ ಮೃತ ದುರ್ದೈವಿ. ಕಮಲೆಪ್ಪ ಗಂಗಾವತಿ ತಾಲೂಕಿನ ಬಸಾಪಟ್ಟಣ ನಿವಾಸಿ ಎಂದು ತಿಳಿದು ಬಂದಿದೆ. ಬಸಾಪಟ್ಟಣದಿಂದ ಇಟ್ಟಿಗೆ ಲೋಡ್ ಮಾಡಿಕೊಂಡು ಬೇವೂರು ಬಳಿಯ ವಣಗೇರಿಗೆ ಟ್ರಾಕ್ಟರ್ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಟ್ರಾಕ್ಟರ್ ಟೈರ್ ಸ್ಪೋಟಗೊಂಡಿದ್ದು, ಪರಿಣಾಮ ಟ್ರಾಲಿ ಪಲ್ಟಿಯಾಗಿದೆ.ಟ್ರಾಲಿಯಲ್ಲಿ ಕುಳಿತಿದ್ದ ಕಾರ್ಮಿಕ ಈ ಅವಘಡದಿಂದ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೇವೂರು ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.