ಕುಷ್ಟಗಿ/ಕೊಪ್ಪಳ:ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮ್ಯಾದರಡೊಕ್ಕಿ ಗ್ರಾಮದಲ್ಲಿ ನಡೆದಿದೆ.
ಗಾಂಜಾ ಬೆಳೆದ ಆರೋಪ: ಓರ್ವನ ಬಂಧನ - ಅಕ್ರಮವಾಗಿ ಗಾಂಜಾ ಗಿಡ ಬೆಳೆದ ಆರೋಪ
ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮ್ಯಾದರಡೊಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Arrest
ಮ್ಯಾದರಡೊಕ್ಕಿ ಗ್ರಾಮದ ಹನಮಂತ ದೇವಪ್ಪ ಯರದೊಡ್ಡಿ ಬಂಧಿತ ವ್ಯಕ್ತಿ. ಈತ ತನ್ನ ಸ್ವಂತ ಜಮೀನಿನ ಹಳೇ ಮನೆಯ ಹಿತ್ತಲಿನಲ್ಲಿ 6 ಕೆಜಿ, 250 ಗ್ರಾಂ ತೂಕದ 7 ಗಿಡಗಳನ್ನು ಬೆಳೆಸಿದ್ದ.
ಇನ್ನು ಅರೋಪಿ ಹನಮಂತ ದೇವಪ್ಪನನ್ನು ಈಗಾಗಲೇ ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಾವರಗೇರಾ ಠಾಣೆಯ ಪಿಎಸ್ ಐ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.
Last Updated : Sep 10, 2020, 1:03 PM IST