ಗಂಗಾವತಿ:ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ವ್ಯಾಪಿಸುತ್ತಿರುವ ಕಾರಣ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ವಾರ್ ರೂಮ್ ಸ್ಥಾಪಿಸಲಾಗಿದೆ.
ಒಮಿಕ್ರಾನ್ ಮತ್ತು ಕೊರೊನಾ ಸಂಕ್ರಾಮಿಕ ಕಾಯಿಲೆಯ ತಡೆಗೆ ಸಂಬಂಧಿಸಿದಂತೆ ಮತ್ತು ಮುಂಜಾಗ್ರತಾ ಕ್ರಮಕೈಗೊಳ್ಳಲು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ವಾರ್ ರೂಮ್ ಇದಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಉಪ ವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ ರೂಮ್ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಶೇ.90ರಷ್ಟು ಸೋಂಕಿತರು ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. ಅಗತ್ಯ ಮಾಹಿತಿ ನೀಡಲು ಮತ್ತು ತುರ್ತು ಸಂದರ್ಭದಲ್ಲಿ ಈ ವಾರ್ ರೂಮ್ ಮೂಲಕ ವೈದ್ಯರು ರೋಗಿಯ ಚಿಕಿತ್ಸೆಗೆ ಧಾವಿಸಲಿದ್ದಾರೆ ಎಂದರು.
ಇದನ್ನೂ ಓದಿ:ಬಿಜೆಪಿ ಬಿಟ್ಟು ಮನೆಗೆ ಹೋಗುತ್ತೇನೆ.. ಆದರೆ, ಬೇರೆ ಪಾರ್ಟಿಗೆ ಹೋಗಲ್ಲ.. ಸಚಿವ ಎಂಟಿಬಿ ನಾಗರಾಜ್