ಕುಷ್ಟಗಿ: ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಮದ ಬೆಂಗಳೂರು ವಿಧಾನಸೌಧವರೆಗೂ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಹೋರಾಟದಲ್ಲಿ ಬಿಜಕಲ್ ಗ್ರಾಮದ ವಯೋವೃಧ್ಧೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
2-ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ : ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಅಜ್ಜಿ - Old woman involved
ಬೆನ್ನು ಬಾಗಿದರೂ ವೇಗದ ಹೆಜ್ಜೆ ಹಾಕಿ ಯುವಕರೂ ಕೂಡ ನಾಚಿಸುವಂತೆ ಹೆಜ್ಜೆ ಹಾಕುತ್ತಿರುವುದು ಗಮನಾರ್ಹ ಎನಿಸಿತು. ಈ ಕುರಿತು ಅಜ್ಜಿಯನ್ನು ಮಾತನಾಡಿಸಿದಾಗ, ನನ್ನ ಮೊಮ್ಮಕ್ಕಳ 2-ಎ ಮೀಸಲಾತಿ ಸಿಗಲಿ ಎಂದು ಸ್ವಾಮಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವೆ ಎಂದಳು.
2-ಎ ಮೀಸಲಾತಿಗೆ ಆಗ್ರಹಿಸಿ ಹೋರಾಟದಲ್ಲಿ ಹೆಜ್ಜೆ ಹಾಕಿದ ಅಜ್ಜಿ
ಬಿಜಕಲ್ ಗ್ರಾಮದ ನಾಗಮ್ಮ ತಳವಗೇರ ವೃಧ್ಧೆ. ಬೆನ್ನು ಬಾಗಿದರೂ ವೇಗದ ಹೆಜ್ಜೆ ಹಾಕಿ ಯುವಕರೂ ಕೂಡ ನಾಚಿಸುವಂತೆ ಹೆಜ್ಜೆ ಹಾಕುತ್ತಿರುವುದು ಗಮನಾರ್ಹ ಎನಿಸಿತು. ಈ ಕುರಿತು ಅಜ್ಜಿಯನ್ನು ಮಾತನಾಡಿಸಿದಾಗ, ನನ್ನ ಮೊಮ್ಮಕ್ಕಳ 2-ಎ ಮೀಸಲಾತಿ ಸಿಗಲಿ ಎಂದು ಸ್ವಾಮಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವೆ. ನನ್ನಿಂದ ಎಷ್ಟು ಸಾದ್ಯವೋ ಅಷ್ಟು ಅವರ ಜೊತೆಯಲ್ಲಿ ಪಾಯಾತ್ರೆ ಭಾಗವಹಿಸುವೆ ಎಂದರು.
ಸಾಧ್ಯವಾದರೆ ಬೆಂಗಳೂರು ವಿಧಾನಸೌಧಕ್ಕೆ ಹೋಗಲು ಸಿದ್ಧಳಾಗಿರುವೆ. ಸ್ವಾಮೀಜಿಯವರ ಪುಣ್ಯದ ಈ ಪಾದಯಾತ್ರೆಯಿಂದ 2-ಎ ಮೀಸಲಾತಿ ಸಿಗಲಿ ಎಂದರು.