ಕರ್ನಾಟಕ

karnataka

ETV Bharat / state

ವಾಯುವಿಹಾರಕ್ಕೆ ತೆರಳಿದ್ದ ವೃದ್ಧೆ ಮೇಲೆ ಟಿಪ್ಪರ್​​ ಹರಿದು ಸ್ಥಳದಲ್ಲೇ ಸಾವು - ಕೊಪ್ಪಳದಲ್ಲಿ ರಸ್ತೆ ಅಪಘಾತ

ಘಟನಾ ಸ್ಥಳಕ್ಕೆ ಮೃತರ ಪುತ್ರ ಆಗಮಿಸಿ ಕಣ್ಣೀರಿಟ್ಟಿರು. ಇವರು ಜಿಲ್ಲಾಸ್ಪತ್ರೆಯಲ್ಲಿ ಸ್ಟಾಫ್​ ನರ್ಸ್​ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೊಪ್ಪಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Old woman dies by road accident
ಕೊಪ್ಪಳದಲ್ಲಿ ಟಿಪ್ಪರ್​ ಹರಿದು ವೃದ್ಧೆ ಸಾವು

By

Published : Mar 20, 2022, 12:08 PM IST

Updated : Mar 20, 2022, 12:54 PM IST

ಕೊಪ್ಪಳ :ವಾಯುವಿಹಾರಕ್ಕೆ ತೆರಳಿದ್ದ ವೃದ್ಧೆಯ ಮೇಲೆ ಟಿಪ್ಪರ್​​ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಬನ್ನಿಕಟ್ಟೆ ಪ್ರದೇಶದ ಬಳಿ ನಡೆದಿದೆ.

ಟಿಪ್ಪರ್​ ಹರಿದು ವೃದ್ಧೆ ಸಾವು

ಸುಶೀಲಮ್ಮ (65) ಎಂಬ ಮೃತ ವೃದ್ಧೆ ಎಂದು ಗುರುತಿಸಲಾಗಿದೆ. ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಸಿಮೆಂಟ್​ ತುಂಬಿದ ಟಿಪ್ಪರ್​ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಮೃತರ ಪುತ್ರ ಆಗಮಿಸಿ ಕಣ್ಣೀರಿಟ್ಟಿರು. ಇವರು ಜಿಲ್ಲಾಸ್ಪತ್ರೆಯಲ್ಲಿ ಸ್ಟಾಫ್​ ನರ್ಸ್​ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೊಪ್ಪಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಿಜಾಬ್ ತೀರ್ಪು ಸಂಬಂಧ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ: ಇಬ್ಬರ ಬಂಧನ

Last Updated : Mar 20, 2022, 12:54 PM IST

ABOUT THE AUTHOR

...view details