ಗಂಗಾವತಿ(ಕೊಪ್ಪಳ):ತಾಲೂಕಿನ ಕನಕಗಿರಿ ಪಟ್ಟಣದಲ್ಲಿ ಕಳೆದ ಆರು ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿದ ಜೋಡಿಯೊಂದು ಒಂದೇ ದಿನ ಇಹಲೋಕ ತ್ಯಜಿಸಿದ ಘಟನೆ ನಡೆದಿದೆ.
6 ದಶಕ ದಾಂಪತ್ಯ ಜೀವನ ನಡೆಸಿ ಸಾವಿನಲ್ಲೂ ಒಂದಾದ ಸತಿ-ಪತಿ! - ಕನಕಗಿರಿ ದಂಪತಿ ನಿಧನ
ಕನಕಗಿರಿ ಮಂಡಳ ಪಂಚಾಯತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಲಿಂಗಾಯತ-ಜಂಗಮ ಸಮಾಜದ ಮುಖಂಡ ಹಾಗೂ ಅವರ ಪತ್ನಿ ಕಳೆದ ಆರು ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿ ಒಂದೇ ದಿನ ಇಹಲೋಕ ತ್ಯಜಿಸಿದ್ದಾರೆ.
6 ದಶಕದ ದಾಂಪತ್ಯ ಜೀವನ ನಡೆಸಿ ಸಾವಿನಲ್ಲೂ ಒಂದಾದ ದಂಪತಿ
ಕನಕಗಿರಿ ಮಂಡಳ ಪಂಚಾಯತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಲಿಂಗಾಯತ-ಜಂಗಮ ಸಮಾಜದ ಮುಖಂಡ ಕೆ.ಮಹಾಬಳೇಶ್ವರ ಸ್ವಾಮಿ ಹಾಗೂ ಅವರ ಪತ್ನಿ ಪ್ರಭಾವತಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಬದುಕಿದ್ದಾಗ ಆದರ್ಶ ಜೀವನ ನಡೆಸಿದ ಈ ಇಬ್ಬರೂ ಒಂದೇ ದಿನ ಇಹಲೋಕ ತ್ಯಜಿಸಿರುವುದು ಕುಟುಂಬ ವರ್ಗವನ್ನು ಶೋಕದಲ್ಲಿ ಮುಳುಗುವಂತೆ ಮಾಡಿದೆ.
ನಸುಕಿನ ಜಾವ 12.30 ಗಂಟೆಗೆ ಪತ್ನಿ ಪ್ರಭಾವತಿ ಹೃದಯಾಘಾತದಿಂದ ಸಾವನ್ನಪ್ಪಿದರು. ಬೆಳಗ್ಗೆ 5.30ಕ್ಕೆ ಪತ್ನಿ ವಿಯೋಗದ ಸುದ್ದಿ ತಿಳಿದ ಮಹಾಬಳೇಶ್ವರ ಸ್ವಾಮಿ ಕೂಡ ಕುಸಿದು ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.