ಕರ್ನಾಟಕ

karnataka

ETV Bharat / state

ಕುಷ್ಟಗಿಯಲ್ಲಿ ಹದಗೆಟ್ಟ ಸಿಮೆಂಟ್​ ಕಾಂಕ್ರೀಟ್ ರಸ್ತೆ - Kushtagi

ಪಟ್ಟಣದಲ್ಲಿ ಚರಂಡಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದ್ದು, ಪಕ್ಕದ ಕಿರು ಚರಂಡಿಗೆ ಪಿಡಬ್ಲ್ಯುಡಿ ವಸತಿ ಗೃಹಗಳಿಂದ ಹರಿದು ಬರುವ ತ್ಯಾಜ್ಯ ನೀರಿನಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

Deteriorated concrete road
ಲೋಕೋಪಯೋಗಿ ವಸತಿ ಗೃಹಗಳಿಂದ ಹದಗೆಟ್ಟ ಕಾಂಕ್ರೀಟ್ ರಸ್ತೆ

By

Published : May 19, 2020, 11:17 PM IST

ಕುಷ್ಟಗಿ: ಪುರಸಭೆ, ತಾಲೂಕು ಸರ್ಕಾರಿ ಆಸ್ಪತ್ರೆ ಮತ್ತು ಹಳೆ ಪ್ರವಾಸಿ ಮಂದಿರ ಸೇರಿದಂತೆ ಇತರೆ ಸಿಮೆಂಟ್ ಕಾಂಕ್ರೀಟ್ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.

ಈ ರಸ್ತೆಗಳ ಎರಡು ಸ್ಲ್ಯಾಬ್​ಗಳು ಹಾಳಾಗಿವೆ. ಚರಂಡಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದ್ದು, ಪಕ್ಕದ ಕಿರು ಚರಂಡಿಗೆ ಪಿಡಬ್ಲ್ಯುಡಿ ವಸತಿ ಗೃಹಗಳಿಂದ ಹರಿದು ಬರುವ ತ್ಯಾಜ್ಯ ನೀರಿನಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.

ರಾತ್ರಿ ವೇಳೆ ಸ್ಥಳೀಯರು ಇದೇ ರಸ್ತೆಯಲ್ಲಿ ಬಯಲು ಬಹಿರ್ದೆಸೆಗೆ ಮುಂದಾಗುತ್ತಾರೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.

ABOUT THE AUTHOR

...view details