ಗಂಗಾವತಿ: ಇದೇ ಹಣಕಾಸು ವರ್ಷದಲ್ಲಿ ಮಂಡಿಸಲಿರುವ ನಗರಸಭೆಯ ಬಜೆಟ್ ಬಗ್ಗೆ ಸಾರ್ವಜನಿಕರು ಸೂಕ್ತ ಸಲಹೆ, ಸೂಚನೆ ನೀಡುವಂತೆ ಕೋರಿ ನಗರಸಭೆಯ ಅಧಿಕಾರಿಗಳು ಆಯೋಜಿಸಿದ್ದ ಸಭೆಗೆ ಸ್ವತಃ ಪೌರಾಯುಕ್ತರೇ ಗೈರು ಹಾಜರಾದ ಹಿನ್ನೆಲೆ ಪ್ರತಿಭಟನೆ ನಡೆಯಿತು.
ಗಂಗಾವತಿ ಬಜೆಟ್ ಸಭೆಗೆ ಪೌರಾಯುಕ್ತರೇ ಗೈರು: ಪ್ರತಿಭಟನೆ - SF Iliger kotar
ಇದೇ ಹಣಕಾಸು ವರ್ಷದಲ್ಲಿ ಮಂಡಿಸಲಿರುವ ನಗರಸಭೆಯ ಬಜೆಟ್ ಬಗ್ಗೆ ಸಾರ್ವಜನಿಕರು ಸೂಕ್ತ ಸಲಹೆ, ಸೂಚನೆ ನೀಡುವಂತೆ ಕೋರಿ ನಗರಸಭೆಯ ಅಧಿಕಾರಿಗಳು ಆಯೋಜಿಸಿದ್ದ ಸಭೆಗೆ ಸ್ವತಃ ಪೌರಾಯುಕ್ತರೇ ಗೈರು ಹಾಜರಾದ ಘಟನೆ ನಡೆಯಿತು.
ಗಂಗಾವತಿಯಲ್ಲಿ ಆಯವ್ಯೆಯ ಸಭೆಗೆ ಪೌರಾಯುಕ್ತರೇ ಗೈರು: ಪ್ರತಿಭಟನೆ
ಪೌರಾಯುಕ್ತ ಎಸ್. ಎಫ್.ಈಳಿಗೇರ ಕೋಟರ್ ಯಾವುದೋ ನೆಪ ಹೇಳಿ ಸಾರ್ವಜನಿಕ ಸಭೆಯಿಂದ ದೂರ ಉಳಿದರು. ಇದರಿಂದಾಗಿ ಸಭೆಗೆ ಬಂದಿದ್ದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದರು. ಇನ್ನೂ ಗೈರಾಗುವ ಬಗ್ಗೆ ಮೊದಲೇ ಯಾವುದೇ ಮಾಹಿತಿ ನೀಡದಿರುವ ನಗರಸಭೆ ಸಿಬ್ಬಂದಿಯ ವೈಖರಿ ಖಂಡಿಸಿ ಕೆಲ ಸಂಘಟನೆಗಳ ಪದಾಧಿಕಾರಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದರು.