ಕರ್ನಾಟಕ

karnataka

ETV Bharat / state

ಅಧಿಕಾರಿಯಿಂದ ಕಿರುಕುಳ ಆರೋಪ: ಚಾಕು ಇರಿದುಕೊಂಡ ಶಿಶು ಅಭಿವೃದ್ಧಿ ಇಲಾಖೆ ಸಿಬ್ಬಂದಿ - ಸಿಡಿಪಿಓ ಕಿರುಕುಳ ಆರೋಪ

ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಸಿಡಿಪಿಓ ಕಿರುಕುಳ ನೀಡುತ್ತಿದ್ದಾರೆ ಎಂದ ಆರೋಪಿಸಿ ಇಲಾಖೆಯ ಕಂಪ್ಯೂಟರ್​ ಆಪರೇಟರ್​ ಚಾಕು ಇರಿದುಕೊಂಡಿರುವ ಘಟನೆ ನಗರದಲ್ಲಿ ನಡೆದಿದ್ದು, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Gangavathi

By

Published : Sep 16, 2019, 8:27 PM IST

ಗಂಗಾವತಿ:ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಸಿಡಿಪಿಓ ಕಿರುಕುಳ ನೀಡುತ್ತಿದ್ದಾರೆ ಎಂದ ಆರೋಪಿಸಿ ಇಲಾಖೆಯ ಕಂಪ್ಯೂಟರ್​ ಆಪರೇಟರ್​ ಚಾಕು ಇರಿದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಚಾಕು ಇರಿದುಕೊಂಡ ಸಿಬ್ಬಂದಿ

ನಗರದಲ್ಲಿರುವ ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅಣ್ಣಪ್ಪ ನಾಯಕ್ ಎಂಬ ವ್ಯಕ್ತಿ ಚಾಕು ಇರಿದುಕೊಂಡಿದ್ದು, ಕೂಡಲೇ ಇವರನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎದೆ ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದುಕೊಂಡಿದ್ದರಿಂದ ಹೆಚ್ಚಿನ ರಕ್ತಸ್ರಾವಾಗಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಗಾಯಾಳು ನೀಡಿದ ಹೇಳಿಕೆ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ದೂರು ದಾಖಲಿಸಿಕೊಂಡು ಸಿಡಿಪಿಒ ತನಿಖೆ ನಡೆಸಿದ್ದಾರೆ. ಈ ವೇಳೆ ಸಿಡಿಪಿಒ ಗಂಗಣ್ಣ ಕಚೇರಿಯಲ್ಲಿ ಕೆಲಸದ ಒತ್ತಡ ಸಹಜ. ಅಣ್ಣಪ್ಪ ನಾಯಕ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ನಿಗಧಿತ ಸಮಯಕ್ಕೆ ಕೆಲಸ ಮುಗಿಸುವಂತೆ ಹೇಳಿದಕ್ಕೆ ಚಾಕು ಇರಿದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details