ಕರ್ನಾಟಕ

karnataka

ETV Bharat / state

ಕೊಪ್ಪಳ: 10 ಮಂದಿ ಸಾರಿಗೆ ಸಿಬ್ಬಂದಿಗೆ ಕೋವಿಡ್​ ಸೋಂಕು

ಕೊಪ್ಪಳ, ಗಂಗಾವತಿ ಹಾಗೂ ಕುಷ್ಟಗಿ ಘಟಕಗಳಲ್ಲಿ ತಲಾ ಮೂವರು ಹಾಗೂ ಕೊಪ್ಪಳದ ಕಚೇರಿಯ ಓರ್ವ ಮಹಿಳಾ ಸಿಬ್ಬಂದಿ ಸೇರಿ 10 ಮಂದಿಗೆ ಕೊರೊನಾ ತಗುಲಿದೆ.

northeast-karnataka-transport-corporation-staff-tested-corona-positive
ಕೊಪ್ಪಳ: 10 ಮಂದಿ ಸಾರಿಗೆ ಸಿಬ್ಬಂದಿಗೆ ಕೋವಿಡ್​ ದೃಢ

By

Published : Apr 28, 2021, 10:40 AM IST

ಕೊಪ್ಪಳ:ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಲ್ಲಿ ನಿನ್ನೆಯವರೆಗೆ 10 ಜನ ಸಿಬ್ಬಂದಿಗೆ ಕೋವಿಡ್​ ಪಾಸಿಟಿವ್ ದೃಢಪಟ್ಟಿದೆ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ ಮಾಹಿತಿ ನೀಡಿದ್ದಾರೆ.

ಕೊಪ್ಪಳ, ಗಂಗಾವತಿ ಹಾಗೂ ಕುಷ್ಟಗಿ ಘಟಕಗಳಲ್ಲಿ ತಲಾ ಮೂವರು ಹಾಗೂ ಕೊಪ್ಪಳದ ಕಚೇರಿಯ ಓರ್ವ ಮಹಿಳಾ ಸಿಬ್ಬಂದಿ ಸೇರಿ 10 ಮಂದಿಗೆ ಕೊರೊನಾ ತಗುಲಿದೆ. 10 ಜನರಲ್ಲಿ 9 ಸಿಬ್ಬಂದಿಗೆ ಸಾರಿಗೆ ನೌಕರರ ಮುಷ್ಕರದಲ್ಲಿದ್ದಾಗ ಪತ್ತೆಯಾಗಿದೆ. ಹೀಗಾಗಿ ಅವರು ಯಾರ ಸಂಪರ್ಕಕ್ಕೂ ಬಂದಿಲ್ಲ.

ಮಹಿಳಾ ಸಿಬ್ಬಂದಿಯು ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 400 ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಈಗ ಕೊರೊನಾ ಕರ್ಫ್ಯೂ ಇರುವುದರಿಂದ ಸಿಬ್ಬಂದಿಗೆ ರಜೆ ನೀಡಲಾಗಿದೆ. ಈ ಅವಧಿಯಲ್ಲಿ ಎಲ್ಲ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಟಿ-20 ವಿಶ್ವಕಪ್‌ ಮೇಲೆ ಕೊರೊನಾ ಕರಿಛಾಯೆ: ಭಾರತದಿಂದ ಚುಟುಕು ಟೂರ್ನಿ ಶಿಫ್ಟ್‌?

ABOUT THE AUTHOR

...view details