ಗಂಗಾವತಿ:ಗ್ರಾ. ಪಂಚಾಯಿತಿ ಚುನಾವಣೆ ವೇಳೆ ಮತದಾರರರಿಗೆ ಕೊಟ್ಟ ಭರವಸೆಯಂತೆ, ಚುನಾಯಿತ ಸದಸ್ಯರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಬಾಡೂಟ ಹಾಕಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಗೆದ್ದ ಖುಷಿ; ಸದಸ್ಯರಿಂದ ವಾರ್ಡ್ ಜನರಿಗೆ ಭರ್ಜರಿ ಬಾಡೂಟ - winning candidates Arrenged lunch at Gangavathi
ಚುನಾವಣೆ ಸಂದರ್ಭದಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಮಾಡುತ್ತಾರೆ. ಪ್ರಸ್ತುತ ದಿನಗಳಲ್ಲಿ ಎಣ್ಣೆ ಪಾರ್ಟಿ ಆಯೋಜನೆ, ಬಾಡೂಟ ಹಾಕಿಸುವುದು ಸಾಮಾನ್ಯವಾಗುತ್ತಿದೆ. ಇದೇ ರೀತಿ, ಗಂಗಾವತಿಯಲ್ಲಿ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು ಇಡೀ ವಾರ್ಡ್ನ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

ಗಂಗಾವತಿಯಲ್ಲಿ ಓಟಿನ ಬಳಿಕ ಬಾಡೂಟ
ಓದಿ:ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಡಿ.ವಿ.ಸದಾನಂದ ಗೌಡ ದಾಖಲು
ವಡ್ಡರಹಟ್ಟಿ ಗ್ರಾಮ ಪಂಚಾಯಿತಿಯ 5ನೇ ವಾರ್ಡ್ನ ಸದಸ್ಯರಾದ ಹುಲಿಗೆಮ್ಮ ರಮೇಶ ಕಾಳಿ, ಹುಸೇನಪ್ಪ ಅಮರಪ್ಪ ಹಾಗೂ ಸುನಿತಾ ವೆಂಕಟೇಶ ಗೌಡ ತಮ್ಮ ವಾರ್ಡ್ನ ಮತದಾರರಿಗೆ ಬಾಡೂಟ ಹಾಕಿಸಿದರು. ಈ ಮೂಲಕ ಮತದಾರರನ್ನು ಗೌರವಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.