ಕರ್ನಾಟಕ

karnataka

ETV Bharat / state

ಬಿಜೆಪಿ ಮುಂದೆ ದೇಶವನ್ನೇ ಮಾರಿದರೂ ಆಶ್ಚರ್ಯವಿಲ್ಲ: ಅಮರೇಗೌಡ ಪಾಟೀಲ್​​​

ಜನರ ಪರವಾಗಿ ಕೆಲಸ ಮಾಡುವ, ಪಕ್ಷಕ್ಕೆ ದುಡಿದವರನ್ನು ಗುರುತಿಸಿ ಕಾಂಗ್ರೆಸ್​​​ನಲ್ಲಿ ಸಚಿವ ಸ್ಥಾನ ನೀಡುವ ಪರಿಪಾಠವಿದೆ. ಆದರೆ ಬಿಜೆಪಿಯಲ್ಲಿ ಎಷ್ಟು ಕೋಟಿ ಹಣವನ್ನು ಕೊಡ್ತಾರೆ ಎಂಬುದರ ಮೇಲೆ ಸಚಿವ ಸ್ಥಾನದ ನಿರ್ಧಾರವಾಗುತ್ತದೆ ಎಂದು ಅಮರೇಗೌಡ ಪಾಟೀಲ್ ಬಯ್ಯಾಪುರ ಆರೋಪಿಸಿದರು.

No wonder BJP has sold the country ahead: Amaregauda Patil
ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ

By

Published : Jan 4, 2021, 7:35 PM IST

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ರೇಲ್ವೆಯನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಇನ್ನೂ ಅನೇಕ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುತ್ತಾರೆ. ಮುಂದೆ ಇವರು ದೇಶವನ್ನು ಮಾರಾಟ ಮಾಡಿದರೆ ಆಶ್ಚರ್ಯವಿಲ್ಲ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ವಾಗ್ದಾಳಿ ನಡೆಸಿದ್ದಾರೆ.

ನಗರದ ಶಿವಶಾಂತ ಮಂಗಲ ಭವನದಲ್ಲಿ ನಡೆದ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿ ಪಕ್ಷ ಬಡವರ ಪಕ್ಷವಲ್ಲ. ಅಲ್ಲಿರುವ ಮುಖಂಡರು ಶ್ರೀಮಂತರು. ಅವರ ಹಿನ್ನೆಲೆ‌ ನೋಡಿದರೆ ನೂರಾರು, ಸಾವಿರಾರು ಕೋಟಿ ರುಪಾಯಿಗಳ ಒಡೆಯರಿದ್ದಾರೆ. ಜನರ ಪರವಾಗಿ ಕೆಲಸ ಮಾಡುವ, ಪಕ್ಷಕ್ಕೆ ದುಡಿದವರನ್ನು ಗುರುತಿಸಿ ಕಾಂಗ್ರೆಸ್​​​ನಲ್ಲಿ ಸಚಿವ ಸ್ಥಾನ ನೀಡುವ ಪರಿಪಾಠವಿದೆ ಎಂದರು.

ಬಿಜೆಪಿ ಮುಂದೆ ದೇಶವನ್ನೇ ಮಾರಿದರೂ ಆಶ್ಚರ್ಯವಿಲ್ಲ: ಅಮರೇಗೌಡ ಪಾಟೀಲ್​​​

ಆದರೆ ಬಿಜೆಪಿಯಲ್ಲಿ ಎಷ್ಟು ಕೋಟಿ ಹಣವನ್ನು ಕೊಡ್ತಾರೆ ಎಂಬುದರ ಮೇಲೆ ಸಚಿವ ಸ್ಥಾನದ ನಿರ್ಧಾರವಾಗುತ್ತದೆ ಎಂದು ಆರೋಪಿಸಿದರು. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯವರು ತಮ್ಮ‌ ಬೆಂಬಲಿಗ ಸದಸ್ಯರು ಗೆದ್ದಿರುವ ಅಂಕಿ-ಅಂಶಗಳ ಬಗ್ಗೆ ಒಬ್ಬೊಬ್ಬ ನಾಯಕರು ಒಂದೊಂದು ರೀತಿ ಹೇಳಿದರು. ಇದರಿಂದ ಬಿಜೆಪಿಯವರು ಸುಳ್ಳು ಹೇಳುತ್ತಾರೆ ಎಂಬುದು ಗೊತ್ತಾಗುತ್ತದೆ. ಆದರೆ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದರು.

ಇದನ್ನೂ ಓದಿ:'ಮೇಕ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಜಾಗತಿಕ ಸ್ವೀಕಾರ ದೊರಕಬೇಕು : ಪ್ರಧಾನಿ ಮೋದಿ

ABOUT THE AUTHOR

...view details