ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಪಂ ವ್ಯಾಪ್ತಿಯ ಕೆ.ಗೋನಾಳ ಗ್ರಾಮದ ಮತಗಟ್ಟೆ ಸಂಖ್ಯೆ 120ಕ್ಕೆ ವ್ಹೀಲ್ ಚೇರ್ ನೀಡದಿರುವ ಕಾರಣ 95 ವರ್ಷದ ವೃದ್ಧೆ ಶಿವಗಂಗಮ್ಮ ಅವರನ್ನು ಎತ್ತುಕೊಂಡು ಬರಲಾಯಿತು.
ಅವರ ಮಗ ಗೌಡಪ್ಪಗೌಡ ಹಾಗೂ ಇನ್ನೋರ್ವ ಸಂಗಪ್ಪಗೌಡ ಶಿವಗಂಗಮ್ಮ ಅವರನ್ನು ಎತ್ತುಕೊಂಡು ಮತಗಟ್ಟೆಗೆ ಕರೆತಂದರು. ಈ ಕುರಿತು ಸ್ಥಳೀಯರು ಸದರಿ ಮತಗಟ್ಟೆಗೆ ವ್ಹೀಲ್ ಚೇರ್ ಬಗ್ಗೆ ತಹಶೀಲ್ದಾರ್ ಎಂ.ಸಿದ್ದೇಶ್ ಅವರ ಬಳಿ ಪ್ರಸ್ತಾಪಿಸಿದರು. ಈಗ ವ್ಹೀಲ್ ಚೇರ್ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನ ತಹಶೀಲ್ದಾರ್ ಅವರು ನೀಡಿದ್ದಾರೆ.