ಗಂಗಾವತಿ: ವಾರಕ್ಕೊಮ್ಮೆ ಮಾತ್ರ ಮಾರುಕಟ್ಟೆಗೆ ಬರುವ ನಾನಾ ತಳಿಯ ಫ್ರೆಶ್ ಮೀನು ಹಾಗೂ ಮೀನಿನ ಮಾಂಸ ಕೊಳ್ಳಲು ಇಲ್ಲಿನ ಜುಲೈ ನಗರದಲ್ಲಿ ಜನರು ಸಾಮಾಜಿಕ ಅಂತರ ಮರೆತು ಮುಗಿಬಿದ್ದ ದೃಶ್ಯ ಕಂಡುಬಂದಿತು.
ಗಂಗಾವತಿಯಲ್ಲಿ ಸಾಮಾಜಿಕ ಅಂತರ ಗಾಳಿಗೆ ತೂರಿ ಮೀನು ಖರೀದಿಗೆ ಮುಗಿಬಿದ್ದ ಜನ
ಗಂಗಾವತಿಯಲ್ಲಿ ವಾರಕ್ಕೊಮ್ಮೆ ಮಾತ್ರ ನಗರದ ಮಾರುಕಟ್ಟೆಗೆ ಬರುವ ನಾನಾ ತಳಿಯ ಫ್ರೆಶ್ ಮೀನು ಹಾಗೂ ಮೀನಿನ ಮಾಂಸ ಕೊಳ್ಳಲು ಜನ ಮುಗಿಬಿದ್ದ ಘಟನೆ ನಡೆಯಿತು. ಕೊರೊನಾ ಭೀತಿಯ ನಡುವೆಯೂ ಯಾವುದೇ ಸಾಮಾಜಿಕ ಅಂತರವಿಲ್ಲದೇ ಜನ ಮೀನು ಖರೀದಿಯಲ್ಲಿ ತೊಡಗಿದ್ದರು.
ಮೀನು ಖರೀದಿಗೆ ಮುಗಿಬಿದ್ದ ಜನ
ಮುಖ್ಯವಾಗಿ ತರಹೇವಾರಿ ತಳಿಯ ಮೀನುಗಳು ಸಮೀಪದ ಕಂಪ್ಲಿಯಿಂದ ಬರುತ್ತಿದ್ದು, ತಾಜಾ ಮೀನು ಮತ್ತು ಮಾಂಸ ಖರೀದಿಗೆ ಜನ ಮುಗಿಬಿದ್ದರು.
ನಗರದಲ್ಲಿ ಎರಡು ಕೊರೊನಾ ಪಾಸಿಟಿವ್ ಕೇಸ್ಗಳಿದ್ದರೂ ಜನರು ಮಾತ್ರ ಮುನ್ನೆಚ್ಚರಿಕೆವಹಿಸದೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದರು.