ಕೊಪ್ಪಳ :ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆಗಾಗಿ ಆರೋಗ್ಯಕರ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಗುಂಪು ಸೇರಬಾರದು ಎಂಬ ನಿಯಮ ಕೊಪ್ಪಳದಲ್ಲಿ ಉಲ್ಲಂಘನೆಯಾಗಿದೆ.
ನಗರದ ಪ್ರವಾಸಿ ಮಂದಿರಕ್ಕೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದಾಗ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಜಮಾಯಿಸಿದ್ದರು. ಸಾಮಾಜಿಕ ಅಂತರ ಮರೆತು ಅಲ್ಲಿ ಕಾರ್ಯಕರ್ತರು ಗಿಜಿಗುಡುತ್ತಿದ್ದರು. ಆರೋಗ್ಯಕರ ಅಂತರಕ್ಕೆ ಡೋಂಟ್‌ಕೇರ್ ಅಂದ ಕಾರ್ಯಕರ್ತರಿಗೆ ಸ್ಥಳದಲ್ಲಿದ್ದ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವರಿಕೆ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ.