ಕರ್ನಾಟಕ

karnataka

ETV Bharat / state

ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆಯಿಂದ ವಿದ್ಯಾರ್ಥಿಗಳ ಮೇಲೆ ಋಣಾತ್ಮಕ ಪರಿಣಾಮ: ಶಿಕ್ಷಣಾಧಿಕಾರಿಗೆ ಮನವಿ - ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಕೆಲಕಾಲ ಸಾಂಕೇತಿಕ ಪ್ರತಿಭಟನೆ

ಪ್ರಸಕ್ತ ವರ್ಷದಿಂದ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆಯ ಚಿಂತನೆ ನಡೆಸಿರುವ ಹಾಗೂ ಕಾರ್ಯಗತಕ್ಕೆ ಕೈಹಾಕಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕರ್ನಾಟಕ ವಿದ್ಯಾರ್ಥಿಸಂಘಟನೆ (ಕೆವಿಎಸ್) ವಿರೋಧ ವ್ಯಕ್ತಪಡಿಸಿ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿತು.

ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬೇಡ: ಕೆವಿಎಸ್ ಆಗ್ರಹ

By

Published : Oct 11, 2019, 11:44 AM IST

ಗಂಗಾವತಿ: ಪ್ರಸಕ್ತ ವರ್ಷದಿಂದ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆಯ ಚಿಂತನೆ ನಡೆಸಿರುವ ಹಾಗೂ ಕಾರ್ಯಗತಕ್ಕೆ ಕೈಹಾಕಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕರ್ನಾಟಕ ವಿದ್ಯಾರ್ಥಿಸಂಘಟನೆ (ಕೆವಿಎಸ್) ವಿರೋಧ ವ್ಯಕ್ತಪಡಿಸಿ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿತು.

ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಕೈಬಿಡಿ: ಕೆವಿಎಸ್ ಆಗ್ರಹ

ಇಲ್ಲಿನ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಕೆಲಕಾಲ ಸಾಂಕೇತಿಕ ಪ್ರತಿಭಟನೆ ನಡೆಸಿದ ಸಂಘಟನೆಯ ಪದಾಧಿಕಾರಿಗಳು ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ಬಿಇಒ ಸೋಮಶೇಖರಗೌಡ ಅವರ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಸಂಚಾಲಕ ಸಂತೋಷ್ ಎಚ್.ಎಂ. ಮಾತನಾಡಿ, ಪಬ್ಲಿಕ್ ಪರೀಕ್ಷೆಯ ಭಯದಿಂದ ಮಕ್ಕಳ ಮಾನಸಿಕ ಹಾಗೂ ಶಾರೀರಿಕ ವಿಕಾಸನದ ಮೇಲೆ ಪರಿಣಾಮ ಬೀರುತ್ತದೆ. ಪಾಲಕರು ಹಾಗೂ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details