ಗಂಗಾವತಿ :ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸುವ ಸಂಬಂಧ ಕಾಂಗ್ರೆಸ್ ಪಕ್ಷದ ನಾಯಕರು ಈಗಾಗಲೇ ರೈತರಲ್ಲಿ ಗೊಂದಲ ಸೃಷ್ಟಿಸುವ ಕೆಲಸಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದ ಕನಕಗಿರಿ ಶಾಸಕ ಬಸವರಾಜ ದಢೇಸ್ಗೂರು, ಅನ್ನದಾತರ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಆಗ್ರಹಿಸಿದ್ದಾರೆ.
ಅನ್ನದಾತರ ವಿಚಾರದಲ್ಲಿ ರಾಜಕೀಯ ಬೇಡ : ಶಾಸಕ ಬಸವರಾಜ ದಢೇಸ್ಗೂರು - ಅನ್ನದಾತರ ವಿಚಾರದಲ್ಲಿ ರಾಜಕೀಯ ಬೇಡ
ರೈತರು ಬೆಳೆದ ಬೆಳೆಯನ್ನು ಯಾವ ಕಾರಣಕ್ಕೂ ಹಾಳಾಗಲು ಬಿಡುವುದಿಲ್ಲ. ರೈತರು ಬೆವರು ವ್ಯರ್ಥವಾಗಲು ಬಿಡುವುದಿಲ್ಲ. ವಿನಃ ಕಾರಣ ಕಾಂಗ್ರೆಸ್ಸಿಗರು ರಾಜಕೀಯ ಮಾಡುತ್ತಾರೆ. ಯಾವ ರೈತರು ನಂಬಬಾರದು..

MLA Basavaraj Dhadesguru
ಕನಕಗಿರಿ ಶಾಸಕ ಬಸವರಾಜ ದಢೇಸ್ಗೂರು
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಬೇಕಿದ್ದರೆ ರಾಜಕೀಯ ಮಾಡಿ. ಆದರೆ, ಕಾಲುವೆಗೆ ನೀರು ಹರಿಸುವ ಸಂಬಂಧ ಮತ್ತು ಅನ್ನದಾತರ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಇದು ಬಹುಕಾಲ ನಡೆಯದು. ಏಪ್ರಿಲ್ 10ರವರೆಗೂ ಕಾಲುವೆಗೆ ನೀರು ಹರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದರು.
ರೈತರು ಬೆಳೆದ ಬೆಳೆಯನ್ನು ಯಾವ ಕಾರಣಕ್ಕೂ ಹಾಳಾಗಲು ಬಿಡುವುದಿಲ್ಲ. ರೈತರು ಬೆವರು ವ್ಯರ್ಥವಾಗಲು ಬಿಡುವುದಿಲ್ಲ. ವಿನಃ ಕಾರಣ ಕಾಂಗ್ರೆಸ್ಸಿಗರು ರಾಜಕೀಯ ಮಾಡುತ್ತಾರೆ. ಯಾವ ರೈತರು ನಂಬಬಾರದು ಎಂದು ರೈತರಲ್ಲಿ ಮನವಿ ಮಾಡಿದರು.