ಕರ್ನಾಟಕ

karnataka

ETV Bharat / state

ಐಸೋಲೇಷನ್​ ವಾರ್ಡ್‌ನಲ್ಲಿ ಇರುವವರ ಭೇಟಿಗೆ ಯಾರೂ ಬರಕೂಡದು: ಜಿಲ್ಲಾಧಿಕಾರಿ - koppal district collector sunil kumar

ಐಸೋಲೇಷನ್​ ವಾರ್ಡಿನಲ್ಲಿ ಇರುವ ವೃದ್ಧೆಯನ್ನು ಮನೆಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಆಕೆಯ ಸಂಬಂಧಿಯೊಬ್ಬ ವಾರ್ಡಿಗೆ ಆಗಮಿಸಿ ಸೂಕ್ತ ಸೌಲಭ್ಯಗಳಿಲ್ಲ ಎಂದು ವಿಡಿಯೊ ಮಾಡಿದ್ದಾನೆ. ಅದು ತಪ್ಪು. ಯಾರೂ ಕೂಡ ಐಸೋಲೇಷನ್​ ವಾರ್ಡ್​ಗೆ ಬರಬಾರದು. ಇದರಿಂದ ಸಮಾಜಕ್ಕೆ ಅಪಾಯ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್ ತಿಳಿಸಿದರು.

koppal district collector sunil kumar
ಸುನೀಲ್​ ಕುಮಾರ್​​

By

Published : May 13, 2020, 7:21 PM IST

ಕೊಪ್ಪಳ: ಕೊರೊನಾ ಸೋಂಕು ತುಂಬಾ ಅಪಾಯಕಾರಿ. ಕ್ವಾರಂಟೈನ್ ಹಾಗೂ ಐಸೋಲೇಷನ್ ವಾರ್ಡ್​​​ನಲ್ಲಿ ಇರುವವರು ದುರ್ವತ ನೆ ತೋರಬಾರದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್​​ ಎಚ್ಚರಿಕೆ ನೀಡಿದರು.

ಶ್ವಾಸಕೋಶ ಸಂಬಂಧಿತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವೃದ್ಧೆಯನ್ನು ಕೊಪ್ಪಳದ ಐಸೋಲೇಷನ್ ವಾರ್ಡ್​​​ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೃದ್ಧೆಯ ಸಂಬಂಧಿ ಇತ್ತೀಚಿಗೆ ಐಸೋಲೇಷನ್ ವಾರ್ಡ್​​​​ಗೆ ಆಗಮಿಸಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ವಿಡಿಯೊ ಮಾಡಿದ್ದಾನೆ. ಅವರು ಹೀಗೆ ಬರಬಾರದು ಎಂದು ಸೂಚಿಸಿದರು.

ಒಂದು ವೇಳೆ ವಾರ್ಡ್​​​ನಲ್ಲಿ ಯಾರಿಗಾದರೂ ಸೋಂಕು ತಗುಲಿದ್ದರೆ, ಇಂತಹ ವ್ಯಕ್ತಿಯ ಮೂಲಕ ಸಮಾಜದಲ್ಲಿ ರೋಗ ಹರಡಲು ಕಾರಣವಾಗುತ್ತದೆ. ವಿಡಿಯೊ ಮಾಡಿರುವ ಆ ವ್ಯಕ್ತಿಯನ್ನು ಸ್ವಯಂ ಕ್ವಾರಂಟೈನ್​​​ಗೆ ಒಳಗಾಗುವಂತೆ ಸೂಚಿಸಿದ್ದೇನೆ. ಏನಾದರೂ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಲಿ ಎಂದರು.

ವೃದ್ಧೆಯನ್ನು‌ ಮನೆಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಈ ರೀತಿ ಮಾಡಿದ್ದಾನೆ. ಯಾರೇ ಆಗಲಿ ಈ ರೀತಿ ವರ್ತಿಸಬಾರದು. ಹೀಗೆ ವರ್ತಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುವವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು‌.

ABOUT THE AUTHOR

...view details