ಗಂಗಾವತಿ: ಕೊರೊನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆದರೆ, ಆತಂಕ ಮತ್ತು ಭಯ ಹುಟ್ಟಿಸುವ ವರದಿಗಳನ್ನು ಮಾಧ್ಯಮಗಳು ಮಾಡಬಾರದು. ಅದೊಂದು ಆತಂಕಕಾರಿ ವಿಷಯವೇ ಅಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ್ ಕಿಶೋರ್ ಹೇಳಿದರು.
ಮಾಧ್ಯಮಗಳಲ್ಲಿ ಭೀತಿ ಹುಟ್ಟಿಸುವ ವರದಿಗಳು ಬೇಡ: ಕೊಪ್ಪಳ ಡಿಸಿ ಮನವಿ - DC Suralarkar Vikas Kishore Statement
ಕೊರೊನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ್ ಕಿಶೋರ್ ಮಾಧ್ಯಮಗಳಿಗೆ ಮನವಿ ಮಾಡಿದರು.

ನಗರದ ಮಂಥನ ಸಭಾಂಗಣದಲ್ಲಿ ನಡೆದ ಕೋವಿಡ್-19 ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಇದುವರೆಗೆ 210 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಈ ಪೈಕಿ 110 ಜನ ಡಿಸ್ಚಾರ್ಜ್ ಆಗಿದ್ದಾರೆ. 7 ಜನ ಮಾತ್ರ ಸಾವನ್ನಪ್ಪಿದ್ದಾರೆ. ನಾವು ಪ್ರಯೋಗಾಲಯಕ್ಕೆ ಕಳುಹಿಸುತ್ತಿರುವ ವರದಿ ಶೇ.3ರಷ್ಟು ಸಾವಿನ ಪ್ರಮಾಣವಾಗಿಲ್ಲ. ಹೀಗಾಗಿ ಅದೊಂದು ಆತಂಕಕಾರಿ ಸಂಗತಿಯಲ್ಲ. ಆದರೆ ಕೊರೊನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಧ್ಯಮಗಳಿಂದಾಗಬೇಕು ಎಂದು ಮನವಿ ಮಾಡಿದರು.
ನಾವು ಪ್ರಯೋಗಾಲಯಕ್ಕೆ ಕಳುಹಿಸುತ್ತಿರುವ ವರದಿ ಶೇ.3ರಷ್ಟು ಸಾವಿನ ಪ್ರಮಾಣವಾಗಿಲ್ಲ. ಹೀಗಾಗಿ ಅದೊಂದು ಆತಂಕಕಾರಿ ಸಂಗತಿಯಲ್ಲ. ಆದರೆ, ಕೊರೊನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಧ್ಯಮಗಳಿಂದಾಗಬೇಕು ಎಂದು ಮನವಿ ಮಾಡಿದರು.