ಕೊಪ್ಪಳ:ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಲ್ಲಿ ಪಿಯುಸಿ ಹಂತವೂ ಒಂದು. ಹೀಗಾಗಿ, ದ್ವಿತೀಯ ಪಿಯುಸಿ ಪರೀಕ್ಷೆ ಬರೆಯೋದನ್ನು ಬಿಡಬಾರದು ಎಂಬ ಉದ್ದೇಶದಿಂದ ನಾಲ್ಕು ದಿನಗಳ ಹಿಂದೆ ಮದುವೆಯಾಗಿರುವ ನವ ವಧುವೊಬ್ಬರು ಇಂದು ನಗರದಲ್ಲಿ ಇಂಗ್ಲಿಷ್ ಪರೀಕ್ಷೆಗೆ ಹಾಜರಾದರು.
ಕೊಪ್ಪಳ: ಪಿಯುಸಿ ಪರೀಕ್ಷೆ ಬರೆಯಲು ತೆರಳಿದ ನವ ವಧು - bride went to puc exam
ನಾಲ್ಕು ದಿನಗಳ ಹಿಂದೆ ಮದುವೆಯಾಗಿರುವ ನವ ವಧುವೊಬ್ಬರು ಇಂದು ಕೊಪ್ಪಳದಲ್ಲಿ ಪಿಯುಸಿ ಪರೀಕ್ಷೆ ಬರೆಯಲು ತೆರಳಿದ್ದು, ಕೈತುಂಬ ಬಳೆ, ಮೆಹಂದಿ ಹಚ್ಚಿಕೊಂಡಿರುವ ನವವಧು ಪರೀಕ್ಷೆಗೆ ತೆರಳಿ ಗಮನ ಸೆಳೆದರು.

ಪಿಯುಸಿ ಪರೀಕ್ಷೆ ಬರೆಯಲು ತೆರಳಿದ ನವ ವಧು
ಪಿಯುಸಿ ಪರೀಕ್ಷೆ ಬರೆಯಲು ತೆರಳಿದ ನವ ವಧು
ಇಂದು ನಡೆಯುತ್ತಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯಲು ನವವಧು ಯಲ್ಲಮ್ಮ ಎಂಬುವರು ಸ್ನೇಹಿತರೊಂದಿಗೆ ಬಂದಿದ್ದರು. ತಾಲೂಕಿನ ಹೊಸ ಬಂಡಿಹರ್ಲಾಪುರ ಗ್ರಾಮದ ಯಲ್ಲಮ್ಮನ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಹೋಗಿದ್ದಾರೆ. ನಾಲ್ಕು ದಿನಗಳ ಹಿಂದೆಯಷ್ಟೇ ತಾಲೂಕಿನ ಬಸಾಪುರ ಗ್ರಾಮದ ಮಂಜುನಾಥ ಎಂಬುವರ ಜೊತೆ ಯಲ್ಲಮ್ಮ ಸಪ್ತಪದಿ ತುಳಿದಿದ್ದಾರೆ.
ಕೈತುಂಬ ಬಳೆ, ಮೆಹಂದಿ ಹಚ್ಚಿಕೊಂಡಿರುವ ನವವಧು ಪರೀಕ್ಷೆಗೆ ತೆರಳಿ ಗಮನ ಸೆಳೆದರು.