ಕರ್ನಾಟಕ

karnataka

ETV Bharat / state

ಕೊಪ್ಪಳ ಜಿಲ್ಲಾಸ್ಪತ್ರೆಯ ರಟ್ಟಿನ ಬಾಕ್ಸ್‌ನಲ್ಲಿ ನವಜಾತ ಶಿಶುವಿನ ಮೃತದೇಹ - ಜಿಲ್ಲಾಸ್ಪತ್ರೆಯಲ್ಲಿ ಬಾಕ್ಸ್‌ನಲ್ಲಿ ನವಜಾತ ಶಿಶುವಿನ ಮೃತದೇಹ

ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿತ್ತು. ವೈದ್ಯರು ಹೆರಿಗೆ ಮಾಡಿಸಿ ಮೃತ ನವಜಾತ ಶಿಶುವನ್ನು ಮಗುವಿನ ತಂದೆಗೆ ಹಸ್ತಾಂತರಿಸಿದ್ದರು..

ನವಜಾತ ಶಿಶುವಿನ ಮೃತದೇಹ
ನವಜಾತ ಶಿಶುವಿನ ಮೃತದೇಹ

By

Published : Oct 31, 2021, 2:59 PM IST

ಕೊಪ್ಪಳ :ಜಿಲ್ಲಾಸ್ಪತ್ರೆಯ ರಟ್ಟಿನ ಬಾಕ್ಸ್‌ನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿ ಹಲವಾರು ಅಂತೆ ಕಂತೆಗಳಿಗೆ ಕಾರಣವಾದ ಘಟನೆ ನಡೆದಿದೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಿಗೋನಾಳ ಗ್ರಾಮದ ಶೈಲಜಾ ಎಂಬುವರಿಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು.

ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿತ್ತು. ವೈದ್ಯರು ಹೆರಿಗೆ ಮಾಡಿಸಿ ಮೃತ ನವಜಾತ ಶಿಶುವನ್ನು ಮಗುವಿನ ತಂದೆಗೆ ಹಸ್ತಾಂತರಿಸಿದ್ದರು.

ಆದರೆ, ಮಗುವಿನ ತಂದೆ ಭೀಮಪ್ಪ ನವಜಾತ ಶಿಶುವಿನ ದೇಹವನ್ನು ರಟ್ಟಿನ ಬಾಕ್ಸ್‌ನಲ್ಲಿಟ್ಟು ಸಂಬಂಧಿಕರನ್ನು ನೋಡಲು ಹೋಗಿದ್ದರಂತೆ.

ಆದರೆ, ಅಲ್ಲಿದ್ದ ಯಾರೋ ರಟ್ಟಿನ ಬಾಕ್ಸ್‌ನಲ್ಲಿಡಲಾಗಿದ್ದ ನವಜಾತ ಶಿಶುವಿನ ಮೃತ ದೇಹದ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details