ಕೊಪ್ಪಳ:ಕೊಪ್ಪಳದ ಬೆಂಕಿ ನಗರದ ಚರಂಡಿಯಲ್ಲಿ 7 ತಿಂಗಳದ ನವಜಾತ ಗಂಡು ಶಿಶು ಪತ್ತೆಯಾದ ಘಟನೆ ಶನಿವಾರ ನಡೆದಿದೆ. ನವಜಾತ ಶಿಶು ಬೆಳಗ್ಗೆ ಪತ್ತೆಯಾದರೂ, ಮಧ್ಯಾಹ್ನ ಬೆಳಕಿಗೆ ಬಂದಿದೆ. ಸ್ಥಳೀಯರು ಭ್ರೂಣ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೊಪ್ಪಳ ಪೋಲಿಸರು, ನವಜಾತ ಗಂಡು ಶಿಶು ಎಸೆದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ವರ್ಷದೊಳಗೆ 6 ನೇ ಪ್ರಕರಣ: ಕೊಪ್ಪಳ ಜಿಲ್ಲಾದ್ಯಂತ ಕಳೆದೊಂದು ವರ್ಷದಲ್ಲಿ ಒಟ್ಟು 6 ನವಜಾತ ಶಿಶುಗಳು ಪತ್ತೆಯಾಗಿವೆ. ಅದರಲ್ಲಿ ಮೂರು ನವಜಾತ ಶಿಶುಗಳು ಮೃತಪಟ್ಟಿದ್ದು, ಇನ್ನುಳಿದ ಮೂರು ಶಿಶುಗಳು ಜೀವಂತವಾಗಿ ಪತ್ತೆಯಾಗಿದ್ದವು. ಈ ಎಲ್ಲ ಶಿಶುಗಳು ಯಲಬುರ್ಗಾ ತಾಲೂಕಿನ ಬೇವೂರು, ತಾವರಗೇರ, ಗಂಗಾವತಿ ತಾಲೂಕಿನ ಮರಳಿ, ಕೊಪ್ಪಳ ಜಿಲ್ಲಾಸ್ಪತ್ರೆ ಸೇರಿದಂತೆ ಚರಂಡಿ, ಪೊದೆ, ಶೌಚಾಲಯದಲ್ಲಿ ಪತ್ತೆಯಾಗಿವೆ.
ಈ ಪ್ರಕಣಗಳೆಲ್ಲ ಮಾಸುವ ಮುನ್ನವೇ ಶನಿವಾರ ಮತ್ತೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೊಪ್ಪಳ ನಗರ ಪೋಲಿಸ್ ಠಾಣಾ ವ್ಯಾಪ್ತಿ ಈ ಘಟನೆ ಜರುಗಿದೆ.
ಪ್ರತ್ಯೇಕದರ್ಶಿಗಳು ಏನೂ ಅಂತಾರೆ?:ನಮ್ಮ ಮನೆ ಸ್ವಚ್ಛತೆ ಮಾಡುತ್ತಿದ್ದೆವು, ನಮ್ಮ ಮನೆ ಮುಂದಿನ ಗಟಾರದಲ್ಲಿ ನವಜಾತು ಶಿಶುವನ್ನು ಎಸೆದು ಹೋಗಿದ್ದರು. ಅದನ್ನು ಮಕ್ಕಳು ನೋಡಿಬಿಟ್ಟು ನಮಗ ಹೇಳಿದ್ರು, ಅದನ್ನು ನಾವು ನೋಡಿ, ಗಂಡು ನವಜಾತ ಶಿಶುವನ್ನು ಗಟಾರದಲ್ಲಿ ಎಸೆದಿದ್ದನ್ನೂ ತೋರಿಸಿದ ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು. ತಕ್ಷಣ ನಾವು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು ಎಂದು ಪ್ರತ್ಯೇಕದರ್ಶಿ ಕೊಪ್ಪಳ ನಿವಾಸಿ ಜುನೇದ್ ತಿಳಿಸಿದ್ದಾರೆ.