ಕೊಪ್ಪಳ: ಪ್ರಸಿದ್ಧ ಕೊಪ್ಪಳದ ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜನವರಿ 30ರಂದು ನಡೆಯುವ ಮಹಾರಥೋತ್ಸವಕ್ಕೆ ಅನೇಕ ಕಾರ್ಯಕ್ರಮಗಳನ್ನು ಈ ಬಾರಿ ರದ್ದುಪಡಿಸಲಾಗಿದೆ.
ಆದರೆ ಈ ವರ್ಷದ ಜಾತ್ರೆಯಂದು ನಡೆಯಲಿರೋ ಕೆಲವು ಕಾರ್ಯಕ್ರಮಗಳ ಕುರಿತು ಮೆಸೇಜ್ ಮೂಲಕ ಭಕ್ತರಿಗೆ ರವಾನೆಯಾಗುವ ವ್ಯವಸ್ಥೆ ಮಾಡಲಾಗಿದೆ. "ಇಂಟರಾಕ್ಟಿವ್ ವಾಟ್ಸ್ಆ್ಯಪ್ ರೆಸ್ಪಾನ್ಸ್ ಸಿಸ್ಟಮ್" ತಂತ್ರಜ್ಞಾನ ಬಳಸಿಕೊಂಡು ಗವಿಮಠದ ಪರಿಚಯ, ಶ್ರೀಗಳ ಸಂದೇಶ, ಜಾತ್ರೆಯಲ್ಲಿ ಈ ಬಾರಿ ಯಾವ ಕಾರ್ಯಕ್ರಮಗಳಿವೆ, ಯಾವ ಕಾರ್ಯಕ್ರಮಗಳು ರದ್ದಾಗಿವೆ, ಪ್ರಸಾದ ವ್ಯವಸ್ಥೆ ಸೇರಿ ಒಟ್ಟು ಮುಖ್ಯ ಏಳು ಅಂಶಗಳು ಲಿಂಕ್ ರೂಪದಲ್ಲಿ ವಾಟ್ಸ್ಆ್ಯಪ್ ಮೂಲಕ ಭಕ್ತರಿಗೆ ರವಾನೆಯಾಗುತ್ತಿದೆ.