ಕೊಪ್ಪಳ:ಇತ್ತೀಚೆಗಷ್ಟೇಮದುವೆಯಾಗಿದ್ದ ನವಜೋಡಿಗಳು ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಮನೆಗೆ ಹೋಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಮನೆಗೆ ಹೊರಟಿದ್ದ ನವಜೋಡಿಗಳು: ಕೊಪ್ಪಳ ಪೊಲೀಸರು ಮಾಡಿದ್ದೇನು? - ಕೊಪ್ಪಳದಲ್ಲಿ ಸಂಪೂರ್ಣ ಲಾಕ್ಡೌನ್
ತಮ್ಮ ಪತ್ನಿಯರನ್ನು ಕರೆದುಕೊಂಡು ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಊರಿಗೆ ಹೊರಟಿದ್ದಾರೆ. ಕೂಡ್ಲಗಿಯ ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿರುವ ಕಾರ್ನಲ್ಲಿ ನೂತನ ದಂಪತಿಗಳು ಸೇರಿ ಸುಮಾರು 7 ಜನರು ಮಸ್ಕಿ ತಾಲೂಕಿನ ಬಸಾಪುರಕ್ಕೆ ಹೊರಟಿದ್ದರು.
ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಕೊಪ್ಪಳದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ ಯಾವುದೇ ವಾಹನ ಓಡಾಡುವ ಹಾಗಿಲ್ಲ. ಆದರೆ ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದ ಬಸವರಾಜ ಹಾಗೂ ಮಾರುತಿ ಎಂಬ ಇಬ್ಬರು ಸಹೋದರರು ಐದು ದಿನಗಳ ಹಿಂದೆ ಮದುವೆಯಾಗಿದ್ದಾರೆ.
ತಮ್ಮ ಪತ್ನಿಯರನ್ನು ಕರೆದುಕೊಂಡು ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಊರಿಗೆ ಹೊರಟಿದ್ದಾರೆ. ಕೂಡ್ಲಗಿಯ ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿರುವ ಕಾರ್ನಲ್ಲಿ ನೂತನ ದಂಪತಿಗಳು ಸೇರಿ ಸುಮಾರು 7 ಜನರು ಮಸ್ಕಿ ತಾಲೂಕಿನ ಬಸಾಪುರಕ್ಕೆ ಹೊರಟಿದ್ದರು. ಕೊಪ್ಪಳದ ಗಡಿಯಾರ ಕಂಬ ಸರ್ಕಲ್ನಲ್ಲಿ ಕಾರು ಬರುತ್ತಿದ್ದಂತೆ ಪೊಲೀಸರು ತಪಾಸಣೆ ಮಾಡಿದ್ದಾರೆ.
ಸರ್ಕಾರಿ ನಾಮಫಲಕವಿದ್ದು, ಬಹಳ ಜನ ಇರುವುದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ತಪಾಸಣೆ ಮಾಡಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಮ್ಮನ್ನು ಬಿಟ್ಟುಬಿಡಿ ವಾಪಸ್ ಊರಿಗೆ ಹೋಗುತ್ತೇವೆ ಎಂದು ನೂತನ ವಧು-ವರರು ಕೇಳಿಕೊಂಡಿದ್ದು, ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.