ಗಂಗಾವತಿ:ಛತ್ರಪತಿ ಶಿವಾಜಿ ಜಯಂತಿ ಆಚರಿಸುವ ಉದ್ದೇಶದಿಂದ ಕಂದಾಯ ಇಲಾಖೆಯ ತಹಶೀಲ್ದಾರ್ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕ್ಷತ್ರೀಯ ಸಮಾಜದ ಯುವ ಮುಖಂಡ ಗಿರೀಶ್ ಗಾಯಕ್ವಾಡ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಶಿವಾಜಿ ಜಯಂತಿ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳಿಗೆ ಕ್ಷತ್ರೀಯ ಸಮಾಜದ ಮುಖಂಡರ ತರಾಟೆ - Gangavthi
ಛತ್ರಪತಿ ಶಿವಾಜಿ ಜಯಂತಿ ಆಚರಿಸುವ ಉದ್ದೇಶದಿಂದ ಕಂದಾಯ ಇಲಾಖೆಯ ತಹಶೀಲ್ದಾರ್ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕ್ಷತ್ರೀಯ ಸಮಾಜದ ಯುವ ಮುಖಂಡ ಗಿರೀಶ್ ಗಾಯಕ್ವಾಡ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಶಿವಾಜಿ ಜಯಂತಿ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖಂಡ
ಜಯಂತಿಯ ಸಂದರ್ಭದಲ್ಲಿ ನಗರವನ್ನು ಸ್ವಚ್ಛವಾಗಿಡಲು ನಗರಸಭೆ ಯತ್ನಿಸುವುದಿಲ್ಲ. ಮಹಾನಗರದ ಬಹುತೇಕ ವೃತ್ತ, ರಸ್ತೆಗಳಲ್ಲಿ ಕಸ ಹರಡಿರುತ್ತದೆ. ಸಮಾಜದ ಬಹುತೇಕ ಮುಖಂಡರಿಗೆ ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ. ಜಯಂತಿ ಆಚರಿಸುವ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಚಂದ್ರಕಾಂತ್, ಜವಾಬ್ದಾರಿಗಳನ್ನು ಇಲಾಖಾವಾರು ಹಂಚಿಕೆ ಮಾಡಲಾಗಿರುತ್ತದೆ. ಹೀಗಾಗಿ ಕೆಲವೊಮ್ಮೆ ಲೋಪಗಳಾಗಿರಬಹುದು ಎಂದು ಸ್ಪಷ್ಟನೆ ಕೊಟ್ಟರು.