ಕುಷ್ಟಗಿ (ಕೊಪ್ಪಳ):ಕುರಬನಾಳದಿಂದ ಕ್ಯಾದಿಗುಪ್ಪ ಕ್ರಾಸ್ವರೆಗೂ ಬೇವಿನ ಮರಗಳನ್ನು ನೆಟ್ಟು ಅರಣ್ಯ ಇಲಾಖೆ ಪೋಷಣೆ ಮಾಡುತ್ತಿದೆ. ಟ್ಯಾಂಕರ್ ಮೂಲಕ ನೀರು ತಂದು ಆರೈಕೆ ಮಾಡುವ ಮೂಲಕ ಹಸಿರು ನಳನಳಿಸುವಂತೆ ಮಾಡಿದೆ.
ಕುಷ್ಟಗಿಯಲ್ಲಿ ಅರಣ್ಯ ಇಲಾಖೆಯ ಪರಿಸರ ಪ್ರೇಮ: ದಾರಿಯುದ್ದಕ್ಕೂ ಬೇವಿನ ಮರಗಳ ಪೋಷಣೆ - ಪ್ರಾದೇಶಿಕ ಅರಣ್ಯ ಇಲಾಖೆ
ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದ ಬಿ.ಪಿ.ದುಧಗಿ ಅವರ ಪ್ರೇರಣೆಯಿಂದ ಕುರಬನಾಳದಿಂದ ಕ್ಯಾದಿಗುಪ್ಪ ಕ್ರಾಸ್ವರೆಗೂ ಬೇವಿನ ಮರಗಳನ್ನು ನೆಟ್ಟು ಅರಣ್ಯ ಇಲಾಖೆ ಪೋಷಣೆ ಮಾಡುತ್ತಿದೆ.
ದಾರಿಯುದ್ದಕ್ಕೂ ಬೇವಿನ ಮರಗಳ ಪೋಷಣೆ
ಹೆದ್ದಾರಿಗೆ ಹೊಂದಿಕೊಂಡಿರುವ ಕಲಕೇರಿ ಸಸ್ಯಪಾಲನ ಕ್ಷೇತ್ರಕ್ಕೆ ಹೋಗಿ ಬರುವಾಗ ಸದಾ ಈ ಸಾಲು ಮರಗಳು ಜನರಿಗೆ ತಂಪಾದ ಗಾಳಿಯನ್ನು ನೀಡುತ್ತದೆ. ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದ ಬಿ.ಪಿ.ದುಧಗಿ ಅವರು, ಈ ಭಾಗದಲ್ಲಿ ಬೇವು ಬೆಳೆಯಲು ಪ್ರೇರೇಪಿಸಿದ್ದರು.
ಈ ಗಿಡಗಳಿಗೆ ಮುಳ್ಳಿನ ಬೇಲಿ ಹೆಣೆದು, ಮೀಟರ್ ವ್ಯಾಪ್ತಿಯಲ್ಲಿ ಪಾತಿ ಅಗೆದು, ಮಳೆಗಾಲದಲ್ಲಿ ನೀರು ಇಂಗಿಸುವ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಇಲ್ಲಿ ಪ್ರತಿ 4 ಕಿ.ಮೀ.ಗೆ ಒಬ್ಬ ವನಪಾಲಕರನ್ನು ಇಲಾಖೆ ನಿಯೋಜಿಸಿದೆ. ಬೇವಿನ ಮರಗಳು ಈ ಮಣ್ಣಿನಲ್ಲಿ ಹುಲುಸಾಗಿ ಬೆಳೆದಿವೆ.