ಕುಷ್ಟಗಿ(ಕೊಪ್ಪಳ):ದಿನಸಿ ಅಂಗಡಿ, ಮದ್ಯದ ಅಂಗಡಿಯಲ್ಲಿ ಜನ ಸರದಿಯಲ್ಲಿ ನಿಂತು ಖರೀದಿಸುವ ರೀತಿಯಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಸರದಿಯಲ್ಲಿ ಹಾಕಿಸಿಕೊಳ್ಳುವ ಪೂರಕ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ನಗರದ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲೂ ಕೋವಿಡ್ ಲಸಿಕೆ ಬಗ್ಗೆ ಜನರಲ್ಲಿ ಭಯ ಹೋಗಿಲ್ಲ. ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.ಈ ಹಿಂಜರಿಕೆ ಹೋಗಲಾಡಿಸಲು ಸ್ವತಃ ಲಸಿಕೆಯನ್ನು ಹಾಕಿಸಿಕೊಂಡಿರುವೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದರು.