ಗಂಗಾವತಿ(ಕೊಪ್ಪಳ):ಕಳೆದ ನಾಲ್ಕು ದಿನಗಳಿಂದ ಇಲ್ಲಿನ ದೇವಘಾಟದ ಸಮೀಪದ ನಡುಗಡ್ಡೆಯಲ್ಲಿ ಸಿಲುಕಿದ್ದ ಇಬ್ಬರು ಕುರಿಗಾಹಿಗಳು ಮತ್ತು 150ಕ್ಕೂ ಹೆಚ್ಚು ಕುರಿಗಳನ್ನು ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಆರಂಭವಾಗಿದ್ದ ರಕ್ಷಣಾ ಕಾರ್ಯ ಸತತ ಎಂಟು ಗಂಟೆಗೂ ಹೆಚ್ಚು ಕಾಲ ನಡೆಯಿತು.
ಗಂಗಾವತಿ: ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಗಳು, 150 ಕುರಿಗಳ ರಕ್ಷಣೆ - NDRF rescue the two persons and sheep in koppal
ನಡುಗಡ್ಡೆಯಲ್ಲಿ ಸಿಲುಕಿದ್ದ ಇಬ್ಬರು ಕುರಿಗಾಹಿಗಳು ಮತ್ತು 150ಕ್ಕೂ ಹೆಚ್ಚು ಕುರಿಗಳನ್ನು ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಗಂಗಾವತಿಯಲ್ಲಿ ರಕ್ಷಿಸಿದ್ದಾರೆ.
ಎನ್ಡಿಆರ್ಎಫ್ ಕಾರ್ಯಾಚರಣೆ
ಮೊದಲಿಗೆ ಇಬ್ಬರು ಕುರಿಗಾಹಿಗಳನ್ನು ದೋಣಿಯ ಮೂಲಕ ಎನ್ಡಿಆರ್ಎಫ್ ರಕ್ಷಣಾ ತಂಡ ಸುರಕ್ಷಿತವಾಗಿ ದಡ ಸೇರಿಸಿತು. ಬಳಿಕ ಎರಡು ದೋಣಿಯ ಮೂಲಕ ಸುಮಾರು ಆರಕ್ಕೂ ಹೆಚ್ಚು ಬಾರಿ ಪ್ರವಾಹಪೀಡಿತ ನದಿಯಲ್ಲಿ ಸಂಚರಿಸಿ ಎರಡು ನಾಯಿ, ಒಂದು ಆಕಳು ಸೇರಿದಂತೆ 150ಕ್ಕೂ ಹೆಚ್ಚು ಕುರಿಗಳನ್ನು ರಕ್ಷಿಸಿದರು.
ಇದನ್ನೂ ಓದಿ :ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು: ಬೆಳಗಾವಿಯಲ್ಲಿ ಪ್ರವಾಹ ಭೀತಿ