ಕೊಪ್ಪಳ:ನಗರದ ಸೃಜನಶೀಲ ಛಾಯಾಗ್ರಾಹಕ ಪ್ರಕಾಶ್ ಕಂದಕೂರ ಅವರ ಛಾಯಾಚಿತ್ರ ರಾಷ್ಟ್ರಮಟ್ಟದ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಗೌರವಕ್ಕೆ ಪಾತ್ರವಾಗಿದೆ.
ಇತ್ತೀಚೆಗಷ್ಟೇ ಕೊಲ್ಕತ್ತಾದ ಗ್ರೀನ್ ಗೋ ಕ್ಲಬ್ನಿಂದ ಪಿನ್ ಪಾಯಿಂಟ್-2021 ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ನಡೆಯಿತು. ಇದರಲ್ಲಿ 'ತಾಯಿ ಮತ್ತು ಮಗು' ವಿಭಾಗದಲ್ಲಿ ಪ್ರಕಾಶ ಕಂದಕೂರು ಅವರ ಬೈಟ್ ಆಫ್ ಲವ್ ಶೀರ್ಷಿಕೆಯ ಛಾಯಾಚಿತ್ರ, ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಗೌರವಕ್ಕೆ ಪಾತ್ರವಾಗಿದೆ. ಅಲ್ಲದೆ, ವಿವಿಧ ವಿಭಾಗಗಳಲ್ಲಿ ಅವರ ಒಟ್ಟು ಏಳು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.