ಕುಷ್ಟಗಿ(ಕೊಪ್ಪಳ):ತಾಲೂಕಿನ ಚಳಗೇರಾ ಹಾಗೂ ಹಿರೆಬನ್ನಿಗೋಳ ಗ್ರಾ. ಪಂ. ವ್ಯಾಪ್ತಿಯಲ್ಲಿನ ರೈತರ ಕೃಷಿ ಜಮೀನುಗಳಲ್ಲಿನ ಬದು ನಿರ್ಮಾಣ ಕಾಮಗಾರಿಯನ್ನು ಕುಷ್ಟಗಿ ತಾಲೂಕು ಪಂಚಾಯತಿ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಅರುಣಕುಮಾರ ದಳವಾಯಿ ಪರಿಶೀಲಿಸಿದರು.
ನರೇಗಾ ಕಾರ್ಮಿಕರಿಗೆ ಯೋಜನೆ ಸಹಾಯಕ ನಿರ್ದೇಶಕರಿಂದ ಪ್ರತಿಜ್ಞಾವಿಧಿ ಬೋಧನೆ - Chalagera of Kushtagi Taluk
ಕುಷ್ಟಗಿ ತಾಲೂಕಿನ ಚಳಗೇರಾ ಹಾಗೂ ಹಿರೆಬನ್ನಿಗೋಳ ಗ್ರಾ.ಪಂ. ವ್ಯಾಪ್ತಿಯಲ್ಲಿನ ರೈತರ ಕೃಷಿ ಜಮೀನುಗಳಲ್ಲಿನ ಬದು ನಿರ್ಮಾಣ ಕಾಮಗಾರಿ ಪರಿಶೀಲಿಸಿದ ತಾಲೂಕು ಪಂಚಾಯತಿ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಅರುಣಕುಮಾರ ದಳವಾಯಿ ಕೂಲಿಕಾರ್ಮಿಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ನರೇಗಾ ಕಾರ್ಮಿಕರಿಗೆ ಯೋಜನೆ ಸಹಾಯಕ ನಿರ್ದೇಶಕರಿಂದ ಪ್ರತಿಜ್ಞಾವಿಧಿ ಭೋಧನೆ
ಈ ವೇಳೆ ಅವರು, ಕೂಲಿಕಾರರು, ಬದು ನಿರ್ಮಾಣ ಕಾರ್ಯದಲ್ಲಿ ಮೈಮರೆಯದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು. ಇದೇ ವೇಳೆ ರೋಜಗಾರ ದಿನಾಚರಣೆ ಪ್ರಯುಕ್ತ ಕೊರೊನಾ ಬಾರದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.
ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡುವುದು, ಕೃಷಿ ಹೊಂಡ ತೋಡುವುದು, ದನದ ದೊಡ್ಡಿ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿಗಳ ಆದ್ಯತೆ ಕುರಿತು ಅವರು ಮಾಹಿತಿ ನೀಡಿದರು. ಜೊತೆಗೆ, ಕಾಯಕ ಮಿತ್ರ ಆ್ಯಪ್ ಬಗ್ಗೆಯೂ ಕಾರ್ಮಿಕರಿಗೆ ತಿಳಿಹೇಳಿದರು.