ಕರ್ನಾಟಕ

karnataka

ETV Bharat / state

ಆರ್ಯ, ಈಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಂಪರ್​! - ಆರ್ಯ, ಈಡಿಗ ಸಮಾಜ

ಆರ್ಯ, ಈಡಿಗ ಸಮಾಜದ ಸುಮಾರು 250 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ.

ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ
Narayan foundation

By

Published : Feb 14, 2020, 12:11 PM IST

ಕೊಪ್ಪಳ:ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಆರ್ಯ, ಈಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರೋತ್ಸಾಹ ಧನ ಯೋಜನೆಯ ಎರಡನೇ ಹಂತದಲ್ಲಿ 250 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಜೆ.ಪಿ.ಪ್ರತಿಷ್ಠಾನದ ಜಿಲ್ಲಾ ಮುಖ್ಯ ಸಂಚಾಲಕ ರಾಘವೇಂದ್ರ ಹುಯಿಲಗೋಳ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಯುವಸಿರಿ ಕಾರ್ಯಕ್ರಮದ‌ ಮೂಲಕ ಆರ್ಯ, ಈಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈಗಾಗಲೇ‌ ಒಂದನೇ ಹಂತದ ಕಾರ್ಯಕ್ರಮ ಮುಗಿದಿದ್ದು, ಎರಡನೇ ಹಂತದ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಇದೇ ಫೆ.16 ರಂದು ಕೊಪ್ಪಳ ನಗರದ ಮಹಾವೀರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದರು.

ಕೊಪ್ಪಳ, ಬಳ್ಳಾರಿ, ಬೀದರ್,‌ಕಲಬುರ್ಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಒಟ್ಟು 250 ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದ್ದು, ಫೆ.16 ರಂದು ನಡೆಯುವ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಜೊತೆಗೆ ಸಾಧಕರಿಗೆ ಸನ್ಮಾನ ನಡೆಯಲಿದೆ. ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ. ಸುಧಾಕರ, ಕೆಪಿಎಸ್​​ಸಿ ಸದಸ್ಯ ಡಾ. ಲಕ್ಷ್ಮಿನರಸಯ್ಯ, ಮಾಜಿ ಸಂಸದ ಎಚ್.ಜಿ. ರಾಮುಲು ಸೇರಿದಂತೆ ಸಮಾಜದ ಅನೇಕ‌ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ರಾಘವೇಂದ್ರ ಹುಯಿಲಗೋಳ ತಿಳಿಸಿದರು.

ಈರಣ್ಣ ಹುಲಗಿ, ಅನಿಲ್ ಹುಲಗಿ, ಕಿರಣಕುಮಾರ್ ಗಂಗಾವತಿ, ಬಸವರಾಜ ಈಳಗೇರ ಸೇರಿದಂತೆ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details