ಕರ್ನಾಟಕ

karnataka

ETV Bharat / state

ರಾಜ್ಯಸಭಾ  ಅಭ್ಯರ್ಥಿ ಅಶೋಕ್​ ಗಸ್ತಿ ಅವರನ್ನು ಅಭಿನಂದಿಸಿದ ಕಟೀಲ್​ - ನಳೀನ್​ ಕುಮಾರ್​ ಕಟೀಲ್​

ರಾಜ್ಯಸಭಾ ಅಭ್ಯರ್ಥಿಯಾಗಿ ನೇಮಕವಾಗಿರುವ ಅಶೋಕ್​ ಗಸ್ತಿ ಅವರನ್ನು ನಳೀನ್​ ಕುಮಾರ್​ ಕಟೀಲ್​ ಅಭಿನಂದಿಸಿದರು.

Nalin Kumar kateel
Nalin Kumar kateel

By

Published : Jun 8, 2020, 6:03 PM IST

ಕೊಪ್ಪಳ:ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಯಾಗಿ ನೇಮಕವಾಗಿರುವ ಅಶೋಕ್ ಗಸ್ತಿ ಅವರಿಗೆ ಸಿಹಿ ತಿನ್ನಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರು ಅಭಿನಂದಿಸಿದರು.

ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದ ಬಳ್ಳಾರಿ ವಿಭಾಗ ಮಟ್ಟದ ಸಂಘಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಅಶೋಕ ಗಸ್ತಿ ಅವರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು.

ಅಲ್ಲದೆ ಇನ್ನೊಬ್ಬ ಅಭ್ಯರ್ಥಿ ಈರಣ್ಣ ಕಡಾಡಿ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಸಚಿವ ಆನಂದ್ ಸಿಂಗ್‌, ಸಂಸದ ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಹಾಲಪ್ಪ ಆಚಾರ್‌ ಸೇರಿದಂತೆ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details