ಗಂಗಾವತಿ: ಡಿ.9ರಂದು ನಡೆಯಲಿರುವ ಹನುಮ ಜಯಂತಿ ಅಂಗವಾಗಿ ನಗರದಲ್ಲಿ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಹನುಮ ಮಾಲಾಧಾರಿಗಳಿಗೆ ಫಲ-ಪುಷ್ಪ ನೀಡಲು ಅವಕಾಶ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ಆಪೇಕ್ಷೆ ವ್ಯಕ್ತಪಡಿಸಿದ್ದಾರೆ.
ಹನುಮ ಮಾಲಾಧಾರಿಗಳಿಗೆ ಫಲ-ಪುಷ್ಪ ನೀಡಲು ಅವಕಾಶ ಕೋರಿ ಎಸ್ಪಿಗೆ ಮುಸ್ಲೀಮ್ ಬಾಂಧವರಿಂದ ಮನವಿ - ಹನುಮ ಜಯಂತಿ, ಸಂಕೀರ್ತನಾ ಯಾತ್ರೆ
ಡಿ.9ರಂದು ನಡೆಯಲಿರುವ ಹನುಮ ಜಯಂತಿ ಅಂಗವಾಗಿ ನಗರದಲ್ಲಿ ನಡೆಯುವ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಹನುಮ ಮಾಲಾಧಾರಿಗಳಿಗೆ ಫಲ-ಪುಷ್ಪ ನೀಡಲು ಅವಕಾಶ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ಆಪೇಕ್ಷೆ ವ್ಯಕ್ತಪಡಿಸಿದ್ದಾರೆ.
![ಹನುಮ ಮಾಲಾಧಾರಿಗಳಿಗೆ ಫಲ-ಪುಷ್ಪ ನೀಡಲು ಅವಕಾಶ ಕೋರಿ ಎಸ್ಪಿಗೆ ಮುಸ್ಲೀಮ್ ಬಾಂಧವರಿಂದ ಮನವಿ hanuman-jayanti](https://etvbharatimages.akamaized.net/etvbharat/prod-images/768-512-5294379-932-5294379-1575669695866.jpg)
hanuman-jayanti
ಎಸ್ಪಿಗೆ ಮುಸ್ಲೀಮ್ ಬಾಂಧವರಿಂದ ಮನವಿ
ಕೊಪ್ಪಳ ಜಿಲ್ಲಾ ಎಸ್ಪಿ ಸಂಗೀತಾ ಅವರನ್ನು ಭೇಟಿ ಮಾಡಿದ ನಗರದ ಜುಮ್ಮಾ ಮಸೀದಿ ಅಧ್ಯಕ್ಷ ನವಾಬ್ ಸಾಬ್ ನೇತೃತ್ವದಲ್ಲಿನ ಮುಸ್ಲಿಂ ಮುಖಂಡರು, ಹನುಮನ ಭಕ್ತರಿಗೆ ನಮ್ಮ ಸಮುದಾಯದಿಂದ ಹಣ್ಣು-ಹೂವು ನೀಡಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಸಂಕೀರ್ತನಾ ಯಾತ್ರೆ ನಡೆಸುವ ಸಂದರ್ಭದಲ್ಲಿ ಭಕ್ತರಿಗೆ ಮತ್ತು ಮೆರವಣಿಗೆಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಈ ಮೂಲಕ ಸೌಹಾರ್ದ ಕಾಪಾಡುತ್ತೇವೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಮನವಿ ಮಾಡಿದರು.