ಕೊಪ್ಪಳ: ನಾಡಿನಾದ್ಯಂತ ಗಣೇಶ ಚತುರ್ಥಿ ಆಚರಣೆ ಸಂಭ್ರಮ ಮನೆ ಮಾಡಿದೆ. ಈ ನಡುವೆ ಕೊಪ್ಪಳದ ದೇವರಾಜ ಅರಸು ಕಾಲೋನಿಯು ಸೌಹಾರ್ದತೆ ಸಾರುವ ಘಟನೆಗೆ ಸಾಕ್ಷಿಯಾಗಿದೆ. ಹಿಂದೂ ಸ್ನೇಹಿತನ ಮನೆಗೆ ಮುಸ್ಲಿಂ ಯುವಕನೊಬ್ಬ ಗಣೇಶ ಮೂರ್ತಿ ಕೊಂಡುಕೊಳ್ಳಲು ಮಾರುಕಟ್ಟೆಗೆ ಆಗಮಿಸಿದ್ದು ಕಂಡು ಬಂದಿದೆ.
ಇದೆಲ್ಲಾ ದೋಸ್ತಿಗಾಗಿ.. ಹಿಂದೂ ಸ್ನೇಹಿತನ ಮನೆಯಲ್ಲಿ ಗಣಪನ ಪ್ರತಿಷ್ಠಾಪಿಸಲು ಬಂದ ಮುಸ್ಲಿಂ ಗೆಳೆಯ
ಗಣೇಶ ಹಬ್ಬದ ದಿನ ಸೌಹಾರ್ದತೆಯ ಸಂಕೇತ ಎಂಬಂತೆ ಮುಸ್ಲಿಂ ಯುವಕನೋರ್ವ ತನ್ನ ಸ್ನೇಹಿತನ ಮನೆಯಲ್ಲಿ ಗಣಪನ ಪ್ರತಿಷ್ಠಾಪನೆಗೆ ಮೂರ್ತಿ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದರು. ಅಚ್ಚರಿ ಎಂದರೆ ಹಿಂದೂ ಸ್ನೇಹಿತನ ಮನೆಯ ಎಲ್ಲ ಹಬ್ಬಕ್ಕೂ ಇವರು ಭೇಟಿ ನೀಡುತ್ತಾರಂತೆ. ಈಟಿವಿ ಭಾರತದ ಜೊತೆ ಮಾತನಾಡಿದ ಇಬ್ಬರೂ ಸ್ನೇಹಿತರು ಸಂತಸ ಹಂಚಿಕೊಂಡಿದ್ದು ಹೀಗೆ!
ಹಿಂದೂ ಸ್ನೇಹಿತನ ಮನೆಯಲ್ಲಿ ಗಣಪನ ಪ್ರತಿಷ್ಠಾಪಿಸಲು ಬಂದ ಮುಸ್ಲಿಂ ಗೆಳೆಯ
ಇಲ್ಲಿನ ಶ್ಯಾಮೀದ್ ಎಂಬಾತ ಭಾಗ್ಯನಗರದ ತಮ್ಮ ಸ್ನೇಹಿತ ಶಿವರಾಜ ಅವರ ಮನೆಯಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪಿಸಲು ಮಾರುಕಟ್ಟೆಗೆ ಆಗಮಿಸಿದ್ದರು. ಸುಮಾರು 6 ವರ್ಷಗಳಿಂದ ಸ್ನೇಹಿತರಾಗಿರುವ ಶ್ಯಾಮೀದ್ ಮತ್ತು ಶಿವರಾಜ್ ಪರಸ್ಪರ ಧರ್ಮದ ಹಬ್ಬಗಳ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಶ್ಯಾಮೀದ್ ಮನೆಯಲ್ಲಿ ಹಬ್ಬವಿದ್ದಾಗ ಶಿವರಾಜ್ ಭೇಟಿ ನೀಡುತ್ತಾರಂತೆ, ಅದೇ ರೀತಿ ಶಿವರಾಜ್ ಮನೆಗೆ ಶ್ಯಾಮೀದ್ ಭೇಟಿ ನೀಡಿ ಹಿಂದೂಗಳ ಹಬ್ಬದಲ್ಲೂ ಭಾಗಿಯಾಗುತ್ತಾರಂತೆ.
ಇದನ್ನೂ ಓದಿ:ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ: ಸಿಎಂ ಸೇರಿದಂತೆ ನಾಯಕರಿಂದ ಶುಭಾಶಯ